india-has-shown-its-strength-will-give-befitting-reply-if-tested-pm-modi-tells-soldiers-in-jaisalmer

ರಾಜಸ್ಥಾನ್: ಇಂದು ನರೇಂದ್ರ ಮೋದಿಯವರು ಜೈಸಲ್ಮೇರ್ ನ ಆಯಕಟ್ಟಿನಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಲು ತೆರಳಿರುವ ನರೇಂದ್ರ ಮೋದಿಯವರು ಮಾತನಾಡುತ್ತ, ” ಭಾರತ ತನ್ನ ಶಕ್ತಿಯನ್ನು ತೋರಿಸಿದ್ದು, ನಮ್ಮನ್ನು ಪರೀಕ್ಷಿಸಿದರೆ ಸಿಗುವ ಉತ್ತರ ತೀವ್ರವಾಗಿರುತ್ತದೆ” ಎಂದು ಅಬ್ಬರಿಸಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿವರ್ಷ ದೀಪಾವಳಿ ಹಬ್ಬವನ್ನು ಗಡಿಯಲ್ಲಿ ಸೈನಿಕರೊಂದಿಗೆ ಆಚರಿಸುತ್ತ ಬಂದಿದ್ದಾರೆ. ಅದೇ ರೀತಿ ಈ ಬಾರಿ ರಾಜಸ್ಥಾನದ ಜೈಸಲ್ಮೇರ್ ನ ಲೋಂಗೆವಾಲದಲ್ಲಿ ಸೈನಿಕರೊಂದಿಗೆ ಕೆಲ ಸಮಯವನ್ನು ಕಳೆದಿದ್ದಾರೆ.

ಇದೆ ಸಮಯದಲ್ಲಿ ಸೈನಿಕರೊಂದಿಗೆ ಮಾತನಾಡುತ್ತ, ” ನೀವು ಹಿಮಚ್ಛಾದಿತ ಪರ್ವತಗಳಲ್ಲಿರಲಿ ಅಥವಾ ಮರುಭೂಮೀಯಲ್ಲಿರಲಿ, ನಾನು ನಿಮ್ಮೊಂದಿಗಿದ್ದಾಗ ಮಾತ್ರ ದೀಪಾವಳಿ ಸಂಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿನ ಸಂತೋಷವನ್ನು ನೋಡಿದಾಗಲೇ ನನ್ನ ಸಂತೋಷ ಹೆಚ್ಚುತ್ತದೆ. ಪ್ರತಿಯೊಬ್ಬ ಭಾರತೀಯರ ಶುಭಾಶಯವನ್ನು ನಾನಿಂದು ನಿಮಗಾಗಿ ತಂದಿದ್ದೇನೆ. ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು” ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ.

ಭಾರತವು ಹಲವಾರು ರಾಷ್ಟ್ರಗಳೊಂದಿಗೆ ತನ್ನ ದೀರ್ಘ ಗಡಿಯನ್ನು ಹೊಂದಿದೆ. ಹಿಮಾಲಯವೇ ಇರಲಿ, ಮರುಭೂಮಿಯೇ ಇರಲಿ, ಸಮುದ್ರ, ದಟ್ಟವಾದ ಅರಣ್ಯ ಎಲ್ಲೆಡೆಯೂ ನಿಮ್ಮ ಶೌರ್ಯ ಎಲ್ಲೆಡೆ ವಿಜಯ ಸಾಧಿಸುತ್ತದೆ. ನಿಮ್ಮ ಶೌರ್ಯದ ಇತಿಹಾಸವನ್ನು ಓದಿದಾಗಲೆಲ್ಲ ಲಾಂಗ್‌ವಾಲಾ ನಮ್ಮ ನೆನಪಿಗೆ ಬರುತ್ತದೆ. 130 ಕೋಟಿ ಭಾರತೀಯರೂ ನಿಮ್ಮೊಂದಿಗೆ ಸದಾ ನಿಂತಿರುತ್ತಾರೆ.

ದೇಶದ ರಕ್ಷಣಾ ಸಾಮರ್ಥ್ಯದ ವೃದ್ಧಿಗೆ ನಾವು ರಕ್ಷಣಾ ವಲಯವನ್ನು ಸಂಪೂರ್ಣ ಆತ್ಮನಿರ್ಭರ ಮಾಡಲು ಕೆಲಸ ಮಾಡುತ್ತಿದ್ದೇವೆ. ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡಲು ನಿರ್ಧರಿಸಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ತೆಗೆದುಕೊಂಡ ಈ ನಿರ್ಧಾರದಿಂದ 130 ಕೋಟಿ ಭಾರತೀಯರೂ ಪ್ರೇರಿತರಾಗಿ ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ.

ನೀವು ಗಡಿಯಲ್ಲಿ ನುಸುಳಿ ಬರುವವರನ್ನು ತಡೆಯುತ್ತಿದ್ದೀರಿ, ಇದರಿಂದಾಗಿ ಈಡೀ ವಿಶ್ವಕ್ಕೆ ಒಂದು ವಿಷಯ ಅರ್ಥವಾಗಿದೆ. ಭಾರತ ತನ್ನ ಹಿತಾಸಕ್ತಿಯ ವಿಚಾರದಲ್ಲಿ ಯಾವತ್ತಿಗೂ ರಾಜಿಮಾಡಿಕೊಳ್ಳುವುದಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಿವೆ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ. ನಾನು ನಿಮ್ಮಲ್ಲಿ ಮೂರು ಅಂಶಗಳನ್ನು ಅಳವಡಿಸಿಕೊಳ್ಳವು ಬೇಡಿಕೊಳ್ಳುತ್ತೇನೆ. ಅದೇನೆಂದರೆ, ನಿಮ್ಮ ಬುದ್ದಿವಂತಿಕೆಯಿಂದ ಹೊಸರೀತಿಯಲ್ಲಿ ಯೋಚಿಸಿ, ಯೋಗಾಭ್ಯಾಸವನ್ನು ಕಡ್ಡಾಯವಾಗಿ ಪಾಲಿಸಿ ಮತ್ತು ನಿಮ್ಮ ಮಾತೃಭಾಷೆ, ಇಂಗ್ಲಿಷ್ ಹೊರತಾಗಿ ಮತ್ತೊಂದು ಬೇರೆ ಭಾಷೆಯನ್ನು ಕಲಿಯಿರಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here