ಅಫ್ಘಾನ್ : ಭಾರತೀಯ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡ ಭಾರತ

india-evacuate-consulate-persons-from-kandahar

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಉಪಟಳ ಹೆಚ್ಚುತ್ತಿರುವಂತೆ ಭಾರತ ಸರಕಾರವು ಕಂದಹಾರ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯಿಂದ ಸುಮಾರು 50 ಕ್ಕೂ ಹೆಚ್ಚು ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆಸಿಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ದಕ್ಷಿಣ ಅಫ್ಘಾನ್ ನಗರದ ಸುತ್ತಲಿನ ಹೊಸ ಪ್ರದೇಶಗಳ ಮೇಲೆ ತಾಲಿಬಾನ್ ಸಂಘಟನೆ ಮತ್ತೆ ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜತಾಂತ್ರಿಕರು, ಸಿಬ್ಬಂಧಿಗಳು ಮತ್ತು ಅಧಿಕಾರಿಗಳನ್ನು ಭಾರತ ವಾಪಸ್ ಕರೆಸಿಕೊಂಡಿದೆ.

ಅಫ್ಘಾನ್ ನಲ್ಲಿನ ಪ್ರಸ್ತುತ ಉಂಟಾಗಿರುವ ಭದ್ರತಾ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಿಬ್ಬಂಧಿಗಳ ಸುರಕ್ಷತೆ ಅತ್ಯಮೂಲ್ಯವಾಗಿದೆ. ಕಂದಾಹಾರದಲ್ಲಿರುವ ಭಾರತೀಯ ಕಾನ್ಸು ಲೆಟ್ ಜನರಲ್ ಅನ್ನು ಮುಚ್ಚಿಲ್ಲ. ಕಂದಹಾರ್ ನಗರದ ಬಳಿ ತೀವ್ರವಾದ ಸಂಘರ್ಷ ನಡೆಯುತ್ತಿರುವುದರಿಂದ ಭಾರತ ಮೂಲದ ಸಿಬ್ಬಂಧಿಗಳನ್ನು ಸದ್ಯಕ್ಕೆ ಕರೆತರಲಾಗಿದೆ. ಇದು ತಾತ್ಕಾಲಿಕ ಕ್ರಮ ಎಂದು ಒತ್ತಿ ಹೇಳಲು ಬಯಸುತ್ತೇನೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಇದನ್ನೂ ಓದಿರಿ:  Breaking News: ಮಹತ್ವದ ನಿರ್ಧಾರ ಪ್ರಕಟಿಸಿದ ಸೂಪರ್ ಸ್ಟಾರ್ ರಜನಿಕಾಂತ್ !

LEAVE A REPLY

Please enter your comment!
Please enter your name here