india-earned-usd-35-million-plus-10-million-euros-through-foreign-satellite-launches-during-2019-21

ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಕಳೆದ ಮೂರು ವರ್ಷಗಳಲ್ಲಿ ಭಾರತವು ಸುಮಾರು 35 ಮಿಲಿಯನ್ ಅಮೆರಿಕಾ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್, ಇಸ್ರೋ ತನ್ನ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ವಾಣಿಜ್ಯ ಆಧಾರದ ಮೇಲೆ ಪಿ ಎಸ್ ಎಲ್ ವಿನಲ್ಲಿ ಇತರ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 

2021-2023ರ ಅವಧಿಯಲ್ಲಿ ಪಿಎಸ್‌ಎಲ್‌ವಿ ಮೂಲಕ ಬಾಹ್ಯಾಕಾಶಕ್ಕೆ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು ನಾಲ್ಕು ದೇಶಗಳ ಗ್ರಾಹಕರೊಂದಿಗೆ ಆರು ಉಡಾವಣಾ ಸೇವಾ ಒಪ್ಪಂದಗಳಿಗೆ ಇಸ್ರೋ ಸಹಿ ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ವಾಣಿಜ್ಯ ಆಧಾರದ ಮೇಲೆ ಈ ವಿದೇಶಿ ಉಪಗ್ರಹಗಳ ಉಡಾವಣೆಯು ಸುಮಾರು 132 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸುತ್ತದೆ.

LEAVE A REPLY

Please enter your comment!
Please enter your name here