ತವಾಂಗ್‌ ಘರ್ಷಣೆ ನಡುವೆಯೇ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!

india-conducts-night-trials-of-nuclear-capable-agni-5

ನವದೆಹಲಿ: ಚೀನಾದೊಂದಿಗಿನ ತವಾಂಗ್‌ ಘರ್ಷಣೆ ಹಸಿರಾಗಿರುವ ಹೊತ್ತಿನಲ್ಲೇ ಭಾರತ ತನ್ನ ಅತ್ಯಂತ ಯಶಸ್ವಿ ಕ್ಷಿಪಣಿ ವ್ಯವಸ್ಥೆಯಲ್ಲಿ ಒಂದಾಗಿರುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದೆ.

ಅಗ್ನಿ-5 ಕ್ಷಿಪಣಿ ಪರೀಕ್ಷೆ ಇಂದು ಒಡಿಶಾ ಕರಾವಳಿಯಲ್ಲಿ ನಡೆಯಿತು. ಪರಮಾಣು ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈ ಸಾಮರ್ಥ್ಯದ ಖಂಡಾತಂರ ಕ್ಷಿಪಣಿ ಅಗ್ನಿ-5 ರಾತ್ರಿ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ಈ ಕ್ಷಿಪಣಿಯಲ್ಲಿ ಮೂರು ಹಂತದ ಘನ ಇಂಧನ ಎಂಜಿನ್ ಅಳವಡಿಸಲಾಗಿದ್ದು, ಅಗ್ನಿ-5 ಐದು ಸಾವಿರ ಕಿಲೋಮೀಟರ್‌ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

ರಕ್ಷಣಾ ತಜ್ಞರ ಪ್ರಕಾರ, ಈ ಕ್ಷಿಪಣಿ ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಮತ್ತು ಹಾಂಗ್ ಕಾಂಗ್ ಸೇರಿದಂತೆ ಇಡೀ ಚೀನಾವನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ‘ಅಗ್ನಿ-5’ ಅದರ ಸರಣಿಯಲ್ಲಿ ಅತ್ಯಾಧುನಿಕ ಅಸ್ತ್ರವಾಗಿದೆ. ಇದು ನ್ಯಾವಿಗೇಷನ್‌ಗಾಗಿ ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಿದೆ. ಪರಮಾಣು ವಸ್ತುಗಳನ್ನು ಸಾಗಿಸುವ ಅದರ ಸಾಮರ್ಥ್ಯವು ಇತರ ಕ್ಷಿಪಣಿ ವ್ಯವಸ್ಥೆಗಳಿಗಿಂತ ಹೆಚ್ಚು ಎನ್ನಲಾಗಿದೆ.

ಇದನ್ನೂ ಓದಿರಿ: ಮಂಗಳೂರು ಕುಕ್ಕರ್‌ ಸ್ಫೋಟ: ಶಾರಿಕ್‌ ನನ್ನು ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ -ಡಿಕೆಶಿ ಪ್ರಶ್ನೆ

ಕೆಲವೇ ಕೆಲವು ದೇಶಗಳು ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಸಿಸ್ಟಮ್ ಅನ್ನು ಹೊಂದಿವೆ. ಈ ವ್ಯವಸ್ಥೆ ಪಾಕಿಸ್ತಾನದ ಬಳಿಯೂ ಇಲ್ಲ.. ಅಮೆರಿಕಾದಲ್ಲಿ, ಚೀನಾ. ರಷ್ಯಾ, ಫ್ರಾನ್ಸ್ ಮತ್ತು ಉತ್ತರ ಕೊರಿಯಾದೊಂದಿಗೆ ಇದೀಗ ಈ ಪಟ್ಟಿಯಲ್ಲಿ ಭಾರತ ಕೂಡ ಇದೆ. ಭಾರತ ಈಗಾಗಲೇ 700 ಕಿ.ಮೀ ವ್ಯಾಪ್ತಿಯ ಅಗ್ನಿ-1, 2000 ಕಿ.ಮೀ ವ್ಯಾಪ್ತಿಯ ಅಗ್ನಿ-2, 2,500 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯ ಅಗ್ನಿ-3 ಕ್ಷಿಪಣಿಗಳನ್ನು ಹೊಂದಿದೆ. ಪಾಕಿಸ್ತಾನದ ವಿರುದ್ಧ ಮಾಡಿದ ತಂತ್ರದ ಅಡಿಯಲ್ಲಿ ಅವುನ್ನು ಸಿದ್ಧಪಡಿಸಲಾಗಿದೆ. ಆದರೆ ಚೀನಾವನ್ನು ಗಮನದಲ್ಲಿಟ್ಟುಕೊಂಡು ಅಗ್ನಿ-4 ಮತ್ತು ಅಗ್ನಿ-5 ಅನ್ನು ಸಿದ್ಧಪಡಿಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here