india-beat-south-africa-by-203-runs

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 203 ರನ್ನುಗಳಿಂದ ಜಯಗಳಿಸಿದೆ. ಈ ಮೂಲಕ ನವರಾತ್ರಿಯ ಸಂಭ್ರಮದಲ್ಲಿ ಮುಳುಗಿದ್ದ ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ದೊರೆತಂತಾಗಿದೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆಯನ್ನು ಸಾಧಿಸಿದೆ. ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಈ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ಸಾಧನೆಯನ್ನು ಮೆಚ್ಚಲೇಬೇಕು. ಪಂದ್ಯದ ಕೊನೆಯ ದಿನವಾದ ಇಂದು ದಕ್ಷಿಣ ಆಫ್ರಿಕಾದ 9 ವಿಕೆಟ್ ಗಳನ್ನು ತೆಗೆಯಬೇಕಾಗಿತ್ತು. ಎರಡನೆಯ ಇನ್ನಿಂಗ್ಸ್ ನಲ್ಲಿ ವೇಗಿ ಮಹಮ್ಮದ್ ಶಮಿ 35 ರನ್ನುಗಳಿಗೆ 5 ವಿಕೆಟ್ ಪಡೆದರೆ, ಜಡೇಜಾ 87ರನ್ನುಗಳಿಗೆ 4 ಆಟಗಾರರನ್ನು ಔಟ್ ಮಾಡಿದರು. ಎರಡನೆಯ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ ಮತ್ತು  ಜಡೇಜಾ ಅವರ ಮಾರಕ ದಾಳಿಯಿಂದಾಗಿ ಸೆಷನ್ಸ್ ಅಂತ್ಯಕ್ಕೆ7ವಿಕೆಟ್ ಪಡೆಯಲು ಸಪಲರಾದರು. ಆದರೆ ಭಾರತ ಎರಡನೇ ಸೆಷನ್ಸ್ ನಲ್ಲಿ 22 ಓವರ್ ಗಳನ್ನು ಎಸೆದು ಕೊನೆಯ ಎರಡು ವಿಕೆಟ್ಗಳನ್ನು ಕಬಳಿಸಿದರು.

ರೋಹಿತ್ ಅವರ ಐತಿಹಾಸಿಕ ಶತಕ 

india-beat-south-africa-by-203-runs

ಕೆ.ಎಲ್. ರಾಹುಲ್ ಅವರ ಆರಂಭಿಕ ಸ್ಥಾನಕ್ಕೆ ಚೊಚ್ಚಲ ಪಾದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ ಅನೇಕ ಸಾಧನೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪ್ರಥಮ ಇನ್ನಿಂಗ್ಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ 244 ಎಸೆತಗಳಲ್ಲಿ 6ಸಿಕ್ಸರ್ 23 ಬೌಂಡರಿಗಳೊಂದಿಗೆ 176ರನ್ನುಗಳನ್ನು ಸಿಡಿಸಿದರು.

ಎರಡನೇ ಇನ್ನಿಂಗ್ಸ್ ನಲ್ಲಿ 149 ಎಸೆತಗಳಲ್ಲಿ 7 ಸಿಕ್ಸರ್ 10 ಬೌಂಡರಿಗಳೊಂದಿಗೆ 127 ರನ್ನುಗಳನ್ನು ಪೇರಿಸಿದರು. ಈ ಮೂಲಕ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಭಾರತದ ಆರನೆಯ ಬ್ಯಾಟ್ಸ್ ಮ್ಯಾನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಅಶ್ವಿನ್ ದಾಖಲೆ 

india-beat-south-africa-by-203-runs

ಭಾರತದ ಅಗ್ರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ 66 ನೇ ಟೆಸ್ಟ್ ಪಂದ್ಯದಲ್ಲಿ 350 ವಿಕೆಟ್ ಗಳಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ವಿಕೆಟ್ ಪಡೆದ ಅಶ್ವಿನ್, ಐದನೆಯ ದಿನ ಥ್ಯೂನಿಸ್ ಡಿ ಬ್ರೂಯಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here