ವಿಶ್ವ ಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಮಾನ ಹರಾಜು..!

india-again-exposed-pakistans-pole-in-united-nations

ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ತಾನದ ಉಗ್ರರು ಬಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷ್ಯಗಳನ್ನು ನೀಡಿದರೂ ಪಾಕಿಸ್ತಾನ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಂತರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಪಾಕಿಸ್ತಾನದ ಮಾನ ಹರಾಜು ಹಾಕಿದೆ.

1993ರಲ್ಲಿ ನಡೆದ ಮುಂಬೈ ಸರಣಿ ಸ್ಪೋಟ ಮತ್ತು 2008 ರಲ್ಲಿ ನಡೆದ ಮುಂಬೈ ಬಾಂಬ್ ಬ್ಲಾಸ್ಟ್ ಗೆ ಸೇರಿದ ದಾಳಿಯ ರೂವಾರಿಗಳು ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದು, ಅವರಿಗೆ ಅಲ್ಲಿನ ಸರಕಾರ ರಾಜಾತಿತ್ಯ ನೀಡುತ್ತಿದೆ. ಅಗತ್ಯ ಸಾಕ್ಷ್ಯಾಧಾರಗಳನ್ನು ಪೂರೈಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಶ್ವ ಸಂಸ್ಥೆ ಆಯೋಜಿಸಿದ್ದ “ಭಯೋತ್ಪಾದಕ ನಿಗ್ರಹ ಸಪ್ತಾಹ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾವೀರ್ ಸಿಂಘ್ವಿ ಹೇಳಿದ್ದಾರೆ.

ಇದನ್ನೂ ಓದಿರಿ:ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ 2 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಈ ದಾಳಿಗಳನ್ನು ನಡೆಸಿರುವುದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ವಿಶ್ವಸಂಸ್ಥೆಯ ಸಮೀತಿಯೇ ಹೇಳಿದ್ದರೂ ಪಾಕಿಸ್ತಾನ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ, ರಕ್ಷಣೆಯನ್ನು ನೀಡಿ ನೋಡಿಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ಸಮುದಾಯದ ಎದುರು ಹೇಳಿದ್ದಾರೆ.

ಇದೆ ಸಮಯದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾರ್ಮಿಕ ವಿಚಾರಗಳಿಂದ ಕಿರುಕುಳ ಮತ್ತು ದೌರ್ಜನ್ಯ ಕುರಿತಾಗಿ ಹೇಳಿದ್ದಾರೆ. ಇದರೊಂದಿಗೆ ಜಮ್ಮು-ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ವಿಚಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುವುದು ಸರಿಯಿಲ್ಲ ಎಂದು ಸಿಂಘ್ವಿ ಅಂತಾರಾಷ್ಟ್ರೀಯ ಸಮುದಾಯದ ಎದುರು ಹೇಳಿದ್ದಾರೆ.


ಜಾಹಿರಾತು

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ:998 6554733  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 998 6554733.


LEAVE A REPLY

Please enter your comment!
Please enter your name here