ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ; 327 ರನ್ ಗಳಿಗೆ ಆಲೌಟ್ !

ind-vs-sa-1st-test-day-3-latest-score-updates-centurion

ಸೆಂಚೂರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾದ ಕರಾರು ವಾಕ್ ಬೌಲಿಂಗ್ ದಾಳಿಗೆ ಭಾರತ ಮೂರನೇ ದಿನಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 327 ರನ್ನುಗಳನ್ನು ಮಾತ್ರ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರವಾಲ್ ಉತ್ತಮ ಆರಂಭವನ್ನು ನೀಡಿದರು. ಮಾಯಾಂಕ್ ಅಗರವಾಲ್ 60 ರನ್ನುಗಳನ್ನು ಗಳಿಸಿ ನಿರ್ಗಮಿಸಿದರು. ನಂತರ ಬಂದ ಚೇತೇಶ್ವರ ಪೂಜಾರ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನಂತರ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ಆರಂಭಿಸಿ, 35 ರನ್ನುಗಳನ್ನು ಗಳಿಸುವಷ್ಟರಲ್ಲಿ ತನ್ನ ವಿಕೆಟ್ ಒಪ್ಪಿಸಿದರು. ಆ ನಂತರ ಅಜಿಂಕ್ಯ ರಹಾನೆ ತಮ್ಮ ಆಟವನ್ನು ಆರಂಭಿಸಿ 48 ರನ್ನುಗಳನ್ನು ಗಳಿಸಿದರು. ಇದಾದ ನಂತರ ಬಂದ ಆಟಗಾರರು ಎರಡಂಕಿಯ ರನ್ನುಗಳನ್ನೂ ಗಳಿಸಲು ವಿಫಲರಾಗಿ ಪೆಲಿವಿಯನ್ ಸೇರಿಕೊಂಡರು.

ರಿಷಬ್ ಪಂತ್ 8, ಅಶ್ವಿನ್ 4, ಶಾರ್ದೂಲ್ 4, ಮೊಹಮ್ಮದ್ ಶಮಿ 8 ರನ್ ಗಳಿಸಿ ಔಟಾದರು. ಇನ್ನು ಕೊನೆಯಲ್ಲಿ ಬುಮ್ರಾ 14 ಸೇರಿದ್ದು ತಂಡ 300ರ ಗಡಿ ದಾಟಲು ಸಾಧ್ಯವಾಯಿತು. ಇನ್ನು ದಕ್ಷಿಣ ಆಫ್ರಿಕಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಲುಂಗಿ ಎನ್‌ಗಿಡಿ (Lungi Ngidi) 6 ವಿಕೆಟ್ ಪಡೆದಿದ್ದರೆ, ಕಾಗಿಸೋ ರಬಾಡ 3 ವಿಕೆಟ್ ಹಾಗೂ ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here