IND vs NZ 1st ODI: ನ್ಯೂಜಿಲ್ಯಾಂಡ್ ಗೆ 307 ರನ್ ಗಳ ಗೆಲುವಿನ ಗುರಿ ನೀಡಿದ ಭಾರತ

ನ್ಯೂಜಿಲ್ಯಾಂಡ್ | ind-vs-nz-1st-odi-washington-sundar-cameo-takes-india-to-306

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಗೆ ಭಾರತ ತಂಡ ಗೆಲ್ಲಲು 307 ರನ್ ಗಳ ಬೃಹತ್ ಗುರಿ ನೀಡಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ಶಿಖರ್ ಧವನ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅವರ ಅರ್ಧಶತಕಗಳ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು 307 ರನ್ ಗುರಿ ನೀಡಿದೆ.

ನ್ಯೂಜಿಲ್ಯಾಂಡ್ ಪರ ಉತ್ತಮ ಬೌಲಿಂಗ್ ಮಾಡಿದ ಸೌಥಿ ಮತ್ತು ಫರ್ಗುಸನ್ ತಲಾ 3 ವಿಕೆಟ್ ಪಡೆದರೆ, ಮಿಲ್ನೆ 1 ವಿಕೆಟ್ ಪಡೆದರು.

ಇದನ್ನೂ ಓದಿರಿ: ಡಿಸೆಂಬರ್ 18 ರಂದು ವಿಷ್ಣುವರ್ಧನ್ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ

 

LEAVE A REPLY

Please enter your comment!
Please enter your name here