ಆಂಗ್ಲರ ಎದುರು ಮಂಡಿಯೂರಿದ ಭಾರತ, ಫೈನಲ್ ತಲುಪಿದ ಇಂಗ್ಲೆಂಡ್

ಅಡಿಲೇಡ್: ಭಾರತ ತಂಡದ ಬೌಲಿಂಗ್ ಹೋರಾಟದ ನಡುವೆಯೂ ಜೋಸ್‌ ಬಟ್ಲರ್‌ (80) ಹಾಗೂ ಅಲೆಕ್ಸ್‌ ಹೇಲ್ಸ್‌ (86) ಅವರ ಅದ್ಬುತ ಬ್ಯಾಟಿಂಗ್ ನಿಂದಾಗಿ ಭಾರತ ಸೆಮಿ ಫೈನಲ್ ನಲ್ಲಿ ಸೋಲನ್ನು ಅನುಭವಿಸಿದೆ. ಈ ಅದ್ಬುತ ಜಯದೊಂದಿಗೆ ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸಿದ್ದು, ಭಾನುವಾರ ಪಾಕಿಸ್ತಾನದೊಂದಿಗೆ ಸೆಣಸಲಿದೆ.

ಭಾರತ ತಂಡ ನೀಡಿದ 169 ರನ್ನುಗಳ ಮೊತ್ತವನ್ನು ಬೆನ್ನತಿಯಿದ ಇಂಗ್ಲೆಂಡ್ ತಂಡ, ಯಾವುದೇ ವಿಕೆಟ್ ನಷ್ಟವಿಲ್ಲದೇ16 ಓವರ್ ನಲ್ಲಿ 170 ರನ್ನುಗಳನ್ನು ಬಾರಿಸಿ ಅದ್ಬುತ ಜಯವನ್ನು ತನ್ನದಾಗಿಸಿಕೊಂಡಿದೆ.

ಈ ಮೂಲಕ ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸಿದ್ದು, ಭಾನುವಾರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಜೊತೆಯಲ್ಲಿ ಆಟವಾಡಲಿದೆ. ಇದೆ ರೀತಿಯ ಉತ್ತಮ ಆಟ ಕೂಡಿಬಂದಲ್ಲಿ ಟಿ 20 ವಿಶ್ವಕಪ್ ಇಂಗ್ಲೆಂಡ್ ಪಾಲಾಗಲಿದೆ.

ಇದನ್ನೂ ಓದಿರಿ: ಸನ್ನಿ ಲಿಯೋನ್ ಗೋವಾ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ವೈರಲ್ !

LEAVE A REPLY

Please enter your comment!
Please enter your name here