imran-khan-is-sure-to-lose-pakistan-if-war-with-india
Image Credit: DNA News

ಇಸ್ಲಾಮಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದೊಂದಿಗೆ ಯುದ್ಧವಾದರೆ ಪಾಕಿಸ್ತಾನ ಸೋಲುವುದು ಖಚಿತ ಎಂದು ಹೇಳಿದ್ದಾರೆ. ನಾನು ಹಿಂಸಾಚಾರವನ್ನು ಬಯಸದ ನಾಯಕ, ಯುದ್ಧದಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡುತ್ತ, ನಾನು ಶಾಂತಿಯನ್ನು ಬಯಸುತ್ತೇನೆ, ಯುದ್ದದಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ವಿಯೆಟ್ನಾಂ ಮತ್ತು ಇರಾಕ್ ಗಳಲ್ಲಿನ ಪರಿಸ್ತಿತಿಯನ್ನು ಉದಾಹರಿಸುತ್ತ, ಯುದ್ಧದ ನಂತರ ಅಲ್ಲಿನ ಪರಿಸ್ಥಿತಿ ಮತ್ತೂ ಹದಗೆಟ್ಟಿರುವುದನ್ನು ನಾವೆಲ್ಲಾ ಕಂಡಿದ್ದೇವೆ ಎಂದರು.

ಇದನ್ನೂ ಓದಿರಿ: ಲಾಡೆನ್ ಪುತ್ರ ಹಮ್ಜಾಬಿನ್ ನ್ನು ಹೊಡೆದುರುಳಿಸಿದ ಅಮೇರಿಕಾ ಸೇನೆ

ಭಾರತದೊಂದಿಗೆ ಯುದ್ಧ ನಡೆದರೆ ನಾವು ಸೋಲುವುದು ಖಚಿತ. ನಾನು ಯುದ್ಧ ವಿರೋಧಿಯಾಗಿದ್ದು, ಯುದ್ಧ ನಡೆಯಲು ಬಿಡುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾನೆ. ಅಲ್ಲದೇ ಪಾಕಿಸ್ತಾನ ಅಣುಬಾಂಬ್ ಹೊಂದಿರುವ ದೇಶವಾಗಿದ್ದು, ನಾವು ಮೊದಲು ಅದರ ಬಳಕೆಯನ್ನು ಮಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿರಿ: ಭಾರತೀಯ ಸೇನಾಪಡೆಗೆ ಅತ್ಯಾಧುನಿಕ 8 ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

LEAVE A REPLY

Please enter your comment!
Please enter your name here