ಭಾರತದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಬೆಂಬಲಿಗರಂತೆ ವಿರೋದಿಗಳೂ ಹೆಚ್ಚಾಗುತ್ತಲೇ ಇದ್ದಾರೆ. ಅನೇಕರು ರಾಜಕೀಯ ಕಾರಣಕ್ಕೆ ದ್ವೇಷಿಸುತ್ತಾರೆ. ಇನ್ನು ಅನೇಕರು ಕಪ್ಪುಹಣ ಕಳೆದುಕೊಂಡು, ತೆರಿಗೆ ತಪ್ಪಿಸಲು ಸಾಧ್ಯವಾಗದೆ ಇನ್ನೂ ಅನೇಕ ಕಾರಣಗಳಿಗಾಗಿ ವಿರೋಧಿಸುತ್ತಾರೆ. ಆದರೆ ನರೇಂದ್ರ ಮೋದಿಯವರು ಆರ್ಥಿಕ ಸುಧಾರಣೆಯಾಗಿ ಅನೇಕ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕಾರಣಗಳಿಂದಾಗಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಅಭಿವ್ರದ್ಧಿಯಾಗುತ್ತಿರುವ ರಾಷ್ಟ್ರಗಳ ಗುಂಪಿನಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿರಿ : ಜಪಾನ್ ನಲ್ಲಿ ಪ್ರಧಾನಿ ಮೋದಿಗೆ ಕನ್ನಡದಲ್ಲಿ ಜೈಕಾರ…!
ಜಗತ್ತಿನ ಎಲ್ಲ ರಾಷ್ಟ್ರಗಳು ಆರ್ಥಿಕ ಪ್ರಗತಿಯಲ್ಲಿ ಕುಸಿತವನ್ನು ಕಾಣುತ್ತಿರುವ ಸಂಧರ್ಭದಲ್ಲಿ ಮೋದಿಯವರ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದಲೂ (ಐಎಂಎಫ್ ) ಪ್ರಶಂಸೆಗಳು ದೊರಕಿವೆ.

ಭಾರತದಲ್ಲಿ ವಿಶೇಷ ಆರ್ಥಿಕ ಸುಧಾರಣಾ ಕ್ರಮಗಳನ್ನು ಮೋದಿ ಸರಕಾರ ಕೈಗೊಂಡಿದ್ದು, ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಮೌಲ್ಯ ಹೆಚ್ಚೇನೂ ಕುಸಿತ ಕಂಡಿಲ್ಲ. ಅಲ್ಲದೇ ದೇಶದಲ್ಲಿ ವಿದೇಶಿ ಹೂಡಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಮೂಲಕ ಭಾರತವನ್ನು ಉಧ್ಯಮಶೀಲ ರಾಷ್ಟ್ರವನ್ನಾಗಿ ನಿರ್ಮಿಸಲಾಗುತ್ತಿದೆ ಎಂದು ಐಎಂಎಫ್ ಹೊಗಳಿದೆ.