ಮೆಲ್ಬೋರ್ನ್: ಭಾರತ-ಪಾಕ್ ಟಿ-20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಶಾನ್ ಮಸೂದ್ ಹಾಗೂ ಇಫ್ತಿಖರ್ ಅಹ್ಮದ್ ಅವರ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.
ಇಂದಿನ ಪದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಪಡೆ, ಆರಂಭದಲ್ಲಿ ಪಾಕ್ ತಂಡಕ್ಕೆ ಆಘಾತವನ್ನೇ ನೀಡಿದರು. ಆರಂಭಿಕರಾಗಿ ಬಂದ ಬಾಬರ್ ಆಜಂ ಡಾಕ್ ಔಟ್ ಆಗುತ್ತಿದ್ದಂತೆ ಪಾಕ್ ಒತ್ತಡಕ್ಕೆ ಸಿಲುಕಿತು. ಅವರ ಜೊತೆಗೆ ಬಂದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಮೊಹಮ್ಮದ್ ರಿಝ್ವಾನ್ (4) ಅವರನ್ನು ಅರ್ಶ್‌ದೀಪ್ ಸಿಂಗ್ ಪೆವಿಲಿಯನ್ ಗೆ ಕಳುಹಿಸುವಲ್ಲಿ ಸಫಲರಾದರು.
ಇದನ್ನೂ ಓದಿರಿ: IND vs PAK: ಕೊಹ್ಲಿ, ಪಾಂಡ್ಯ ಜೊತೆಯಾಟಕ್ಕೆ ಗೆದ್ದು ಬೀಗಿದ ಭಾರತ
ಮೂರು ಮತ್ತು ನಾಲ್ಕನೇಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಾನ್ ಮಸೂದ್ ಹಾಗೂ ಇಫ್ತಿಖರ್ ಫಿಕರ್ ಅಹ್ಮದ್ ಸಾಂಘಿಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭರ್ಜರಿ ಬೌಂಡರಿ ಸಿಕ್ಸರ್‌ಗಳ ಆಟದಿಂದ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 50 ಎಸೆತಗಳಲ್ಲಿ 76 ರನ್‌ಗಳು ಸೇರ್ಪಡೆಯಾಯಿತು. ಭರ್ಜರಿ ಸಿಕ್ಸ್ ಬಾರಿಸಿದ ಇಫ್ತಿಖರ್ 34 ಎಸೆತಗಳಲ್ಲಿ ಆಕರ್ಷಕ 51 ರನ್ (4 ಸಿಕ್ಸರ್, 2 ಬೌಂಡರಿ) ಗಳಿಸಿ ಮಿಂಚಿದರು. ಈ ವೇಳೆ ಇಫ್ತಿಖರ್ ಆಟಕ್ಕೆ ಶಮಿ ಬ್ರೇಕ್ ಹಾಕಿದರು. ಆ ನಂತರವೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಮಸೂದ್ 42 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ನಂತರದಲ್ಲಿ ಕ್ರೀಸ್‌ಗಿಳಿಸಿದ ಶಹದಾಬ್ ಖಾನ್ 5 ರನ್, ಹೈದರ್ ಅಲಿ 2 ರನ್, ಮೊಹಮ್ಮದ್ ನವಾಜ್ 9 ರನ್, ಅಸಿಫ್ ಅಲಿ 2 ರನ್ ಹಾಗೂ ಶಾಹೀನ್ ಶಾ ಆಫ್ರಿದಿ 16 ರನ್ ಗಳಿಸಿದರೆ ಹ್ಯಾರಿಸ್ ರಫ್ 6 ರನ್‌ಗಳಿಸಿ ಅಜೇಯರಾಗುಳಿದರು.
ಭಾರತೀಯ ಬೌಲರ್ ಗಳ ಉತ್ತಮ ಪ್ರದರ್ಶನ
ಪಾಕ್ ತಂಡದ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿದರೇ 32 ರನ್ ನೀಡಿದ ಅರ್ಶ್‌ದೀಪ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದರು. 4 ಓವರ್‌ಗಳಲ್ಲಿ 25 ರನ್ ನೀಡಿದ ವೇಗಿ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ 22 ರನ್ ನೀಡಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿರಿ: ಮತ್ತೆ ಕ್ಸಿ ಜಿನ್ ಪಿಂಗ್‌ಗೆ ಚೀನಾದ ಚುಕ್ಕಾಣಿ, ಸತತ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಕಮ್ಯುನಿಸ್ಟ್ ನಾಯಕ