ನಮ್ಮ ದೇಶದ ಗಡಿಯನ್ನು ಹಗಲು, ರಾತ್ರಿ, ಮಳೆ, ಬಿಸಿಲು, ಚಳಿ ಎನ್ನದೇ ಸದಾಕಾಲ ನಮಗಾಗಿ ಗಡಿ ಕಾಯುತ್ತ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಸಲಾಮ್ ಹೇಳುತ್ತ ಒಂದು ವಿಶೇಷವಾದ ವಿಚಾರವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ ಗೆಳೆಯರೆ…

ನಮ್ಮ ರಕ್ಷಣೆಗಾಗಿ ತನ್ನ ಪರಿವಾರ ಮತ್ತು ತನ್ನ ಜೀವವನ್ನೇ ಲೆಕ್ಕಿಸದೆ ಭಾರತ ಮಾತೆಯ ಸೇವೆಗಾಗಿ ಸದಾ ಸಿದ್ದವಿರುವ ಸೈನಿಕರಿಗೆ ಎಷ್ಟು ಬಾರಿ ನಮನ ಹೇಳಿದರೂ ಸಾಲದು. ಎಲ್ಲಿಯೇ ಭಯೋತ್ಪಾದಕ ಘಟನೆ,ಪ್ರವಾಹ, ಅತಿವೃಷ್ಟಿ, ಏನೇ ಅವಗಡ ಸಂಭವಿಸಿದರೂ ಅಲ್ಲಿ ಸದಾ ನಮ್ಮ ಸೇವೆಯಲ್ಲಿರುವವರಲ್ಲಿ ನಮ್ಮ ಸೈನಿಕರು ಮೊದಲಿಗರು. ಸದಾ ನಮ್ಮ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೈನಿಕರ ಜೀವ ಯಾವಾಗಲೂ ಆಪತ್ತಿನಲ್ಲಿಯೇ ಇರುತ್ತದೆ.

ದೇಶದ ರಕ್ಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ನಮ್ಮ ಸೈನಿಕರು ವೀರಮರಣವನ್ನಪ್ಪಿದರೆ ಅವರ ಕುಟುಂಬಕ್ಕೆ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡುವ ಸಲುವಾಗಿ ರೂಪುಗೊಂಡ ವೆಬ್ ಸೈಟ್ ಇಂಡಿಯಾಸ್ ಬ್ರೇವ್ ಹಾರ್ಟ್ಸ್” (India’s Bravehearts). ಈ ಜಾಲತಾಣದಲ್ಲಿ ವೀರಗಾಥೆ ಮತ್ತು ಸಾಧನೆಗಳ ಕುರಿತಾದ ಪೋಟೊ ಗ್ಯಾಲರಿಯನ್ನು ಕಾಣಬಹುದು. ಎಡಬಾಗದಲ್ಲಿ ಮ್ಯೂಸಿಕ್‌ ಬಟನ್ ನೀಡಲಾಗಿದ್ದು ಅದನ್ನು ಪ್ಲೇ ಮಾಡಿಕೊಂಡು ಗೆಲರಿಯನ್ನೋಮ್ಮೆ ನೋಡಿ ನಿಮ್ಮ ಮನಸ್ಸು ಕರಗದೇ ಇರದು.

ಪೋಟೋ: ಗೂಗಲ್ ಕ್ರಪೆ 

ಈ ತಾಣದ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಭಾರತೀಯ ಹುತಾತ್ಮ ವೀರ ಯೋದರ ಕುಟುಂಬಗಳಿಗೆ 15 ಲಕ್ಷದ ವರೆಗೆ ಹಣ ಸಹಾಯ ಮಾಡುವ ಒಂದು ಯೋಜನೆ ಇದಾಗಿದೆ. ಅಕ್ಷಯ್ ಕುಮಾರ್ ನೇತ್ರತ್ವದಲ್ಲಿ ಕೇಂದ್ರ ಸರಕಾರ ಈ ತಾಣವನ್ನು ರಚಿಸಿದ್ದು,  ಇದರಲ್ಲಿ ಸೈನ್ಯದ ಅಸ್ಸಾಂ ರೈಫಲ್ಸ್, BSF, CISF, CRPF, ITBF, NDRF, NSG, SSB ಯ ತಂಡಗಳ ಸೈನಿಕರು ಒಳಗೋಂಡಿರುತ್ತಾರೆ. ಪ್ರತಿಯೋಬ್ಬ ಹುತಾತ್ಮ ಯೋಧನಿಗೆ ಅಥವಾ ಭಾರತ್ ಕೆ ವೀರ್ ಕಾಪ್ಸ್ ಪಂಡ್ ಗೆ ಹಣ ವರ್ಗಾವಣೆ ಮಾಡಬಹುದು.

ಹಣ ಸಂದಾಯ ಮಾಡುವ ವಿಧಾನ : 

 • ಈ ವೆಬ್ ಸೈಟ್ ತೆರೆಯಲು www.bhartkeveer.gov.in ಗೆ ಮಾತ್ರ ಹೋಗಿ.ಈ ರೀತಿ ಹೇಳಿಕೊಳ್ಳುವ ಕೆಲವು ನಕಲಿ ಸೈಟ್ ಗಳಿದ್ದು ಮೋಸ ಹೋಗಬೇಡಿ.ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡುವ ಮುಲಕ ಅಲ್ಲಿಗೆ ಹೋಗಬಹುದು..
 • www.bhartkeveer.gov.in
 • ನೇರವಾಗಿ ಪ್ರತಿಯೊಂದು ಸೈನಿಕರಿಗೆ ನೀಡಲು Contribute to Bravehearts ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 • ಇಲ್ಲಿ ನಿಮಗೆ ವೀರಮರಣ ಹೊಂದಿದ ಪ್ರತಿಯೊಂದು ಸೈನಿಕರ ವಿವರಗಳೊಂದಿಗೆ ಪೋಟೊಗಳು ಕಂಡುಬರುತ್ತವೆ.
 • ಯಾವುದಾದರೂ ಒಬ್ಬರ ಪ್ರೊಪೈಲ್ ಮೇಲೆ ಇರುವ I Would like to contribute ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 • ನೀವು ನೀಡಲು ಬಯಸಿದ ಮೊತ್ತವನ್ನು ಬರೆದು Proceed ಮೇಲೆ ಕ್ಲಿಕ್ ಮಾಡಿ..
 • ನಂತರ ಮೊಬೈಲ್ ನಂ. ಮತ್ತು ನೀಡಿದ ಕ್ಯಾಪ್ಚಾ ತುಂಬಿ ಒಟಿಪಿ ಆಯ್ಕೆ ಒತ್ತಿರಿ.
 • ಒಟಿಪಿ ನೀಡಿ, ಹೆಸರು ಮತ್ತು ಇ-ಮೇಲ್ ವಿಳಾಸ ನೀಡಿ Submit ಕ್ಲಿಕ್ ಮಾಡಿ.
 • ನಂತರ ತೆರೆದುಕೊಂಡ ಪೇಜ್ ನಲ್ಲಿ ಪೆಮೆಂಟ್ ಡೀಟೆಲ್ ತುಂಬಿ ಸಂದಾಯ ಮಾಡಿ.
  ನಂತರ ನೀವು ನೀಡಿದ ಹಣಕ್ಕೆ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. 
ಪ್ರಶಸ್ತಿ ಪತ್ರ 

ಈ ಮೂಲಕ ದೇಶ ಕಾಯುವ ಸೈನಿಕರ ಪರಿವಾರಕ್ಕೆ ಸಣ್ಣ ಸಹಾಯ ಮಾಡಿ ಕೃತಜ್ಞತೆಯನ್ನು ಹೇಳುವ ಪ್ರಯತ್ನ ಮಾಡೋಣ. ಇಲ್ಲಿ ನೀಡುವ ಹಣವು 80 G ಪ್ರಕಾರ ಆದಾಯ ತೆರಿಗೆಯಿಂದ ವಿನಾಯಿತಿಯನ್ನೂ ಪಡೆದಿದೆ. ಹುಟ್ಟಿದ ದಿನದ ಆಚರಣೆ ಮಾಡಿ ಹಣ ವ್ಯರ್ಥ ಮಾಡುವ ಬದಲು ಆ ದಿನದ ನಿಮಿತ್ತ ದಾನಮಾಡಿ ಕೃತಜ್ಞತೆ ಅರ್ಪಿಸಿ. ನಮ್ಮ ನಿಮ್ಮಿಂದ ಈ ಸಣ್ಣ ಸಹಾಯ ಅವರ ಪರಿವಾರಕ್ಕೆ ಜೀವನ ನಿರ್ವಹಣೆಯ ಭಲವಾಗಲಿ ಎಂದು ಆಶಿಸುತ್ತೇನೆ.

ಇದನ್ನೂ ಓದಿರಿ : ದೀಪಾವಳಿಗೆ ಅಯೋಧ್ಯೆಯ ಕುರಿತಾದ ಸಿಹಿ ಸುದ್ದಿ ನೀಡಿದ ಯೋಗಿ ಆದಿತ್ಯನಾಥ್

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here