ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

housewarming-ceremony-of-vishnuvardhan

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಗೃಹ ಪ್ರವೇಶ ಇಂದು ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಜಗ್ಗೇಶ್, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಯನಗರದ 4ನೇಯ ಬ್ಲಾಕ್ ನಲ್ಲಿ ವಿಷ್ಣುವರ್ಧನ್ ಮನೆಯೊಂದನ್ನು ಕಟ್ಟಿಸಿದ್ದರು. ಆ ಮನೆಯಲ್ಲಿಯೇ ಹಲವು ವರ್ಷಗಳ ಕಾಲ ವಾಸವಿದ್ದರು. ಆ ಮನೆಯನ್ನು ನವೀಕರಿಸುವುದು ಅವರ ಕನಸಾಗಿತ್ತು, ಆದರೆ ಅದು ಸಾಧ್ಯವಾಗಿರಲಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆದರೆ ಕೊರೋನಾ ಕಾರಣಗಳಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಇದೀಗ ಮನೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, “ವಲ್ಮೀಕ” ಎಂದು ಹೆಸರನ್ನು ಇಡಲಾಗಿದೆ. ಇಂದು ಅದ್ದೂರಿಯಾಗಿ ಗ್ರಹಪ್ರವೇಶ ಸಮಾರಂಭ ನೆರವೇರಿದ್ದು, ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ, ನಟ ಜಗ್ಗೇಶ್, ಸಂಸದೆ ಸುಮಲತಾ ಅಂಬರೀಶ್, ರಮೇಶ್ ಭಟ್ ಗಿರಿಜಾ ಲೋಕೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿರಿ: Indian Navy Recruitment: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ

LEAVE A REPLY

Please enter your comment!
Please enter your name here