ನವದೆಹಲಿ : ಭಾರತದ ಸೆರಂ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾ ಹಾಗೂ ಬ್ರಿಟನ್ ನ ಅಸ್ತ್ರಾ ಜೇನೇಕಾ ಸಂಸ್ಥೆಗಳು ಸೇರಿ ಕೊರೊನಗೆ ಔಷಧ ತಯಾರಿಕೆಯಲ್ಲಿ ನಿರತವಾಗಿವೆ.

ಸೆರಂ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾ ತಯಾರಿಸುತ್ತಿರುವ ಕೊರೊನಾ ಲಸಿಕೆಯ ಅಂತಿಮ ದರವನ್ನು 2 ತಿಂಗಳಿನಲ್ಲಿ  ಪ್ರಕಟಿಸುವ ಸಾಧ್ಯತೆ ಇದೆ. ಈ ವರ್ಷದ ಅಂತ್ಯಕ್ಕೆ ನಾವು ಕೊರೋನಾ ಲಸಿಕೆಯನ್ನು ಹೊಂದಲಿದ್ದೇವೆ. ಐಸಿಎಂಆರ್‌ ಜೊತೆಗೂಡಿ ಭಾರತದಲ್ಲಿ ಕೆಲವು ಸಾವಿರ ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುವುದು ಎಂದು ಸೆರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಪೂನಾವಾಲಾ ತಿಳಿಸಿದ್ದಾರೆ.

ಇದನ್ನೂ ಓದಿರಿ: ಕೊರೊನಾ ವೈರಸ್ ನಾಶಮಾಡಬಲ್ಲ ಸುಲಭ ಪರಿಹಾರ ಕಂಡುಹಿಡಿದ ರಷ್ಯಾ..!

ಲಸಿಕೆ ಪ್ರಯೋಗದ ಭಾಗವಾಗಿ ಪುಣೆ ಹಾಗೂ ಮುಂಬೈನಲ್ಲಿ 4000 ದಿಂದ 5000 ಜನರ ಮೇಲೆ ಆಗಸ್ಟ್‌  ಅಂತ್ಯದ ವೇಳೆಗೆ ಲಸಿಕೆಯನ್ನು ಪ್ರಯೋಗಿಸಲು ಸೆರಂ ಸಂಸ್ಥೆ ಉದ್ದೇಶಿಸಿದೆ. ಎಲ್ಲಾ ದೇಶಗಳಿಗೂ ಸಿಗಲೇಂದು  ಬಿಲ್ಗೇಟ್ ಅಂಡ್ ಮಿಲಿಂದ ಗೇಟ್ಸ್ ಪೌಂಡೇಶನ್ 100 ಮಿಲಿಯನ್ ಹಣವನ್ನು ಔಷದ ಉತ್ಪಾದಿಸಲು ನೀಡಿದೆ.

LEAVE A REPLY

Please enter your comment!
Please enter your name here