honor-to-corona-warriors-in-jambu-sawari-parade

ಮೈಸೂರು: ಇಂದು ನಡೆದ ಮೈಸೂರು ದಸರಾ ಜಂಬೂ ಸವಾರಿ ಉತ್ಸವದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದಿಂದ ಕಾಪಾಡುತ್ತಿರುವ ವೈದ್ಯಕೀಯ ಕ್ಷೇತ್ರಕ್ಕೆ ಗೌರವ ಸಲ್ಲಿಸಲಾಯಿತು.

ಈ ಬಾರಿ ಮೈಸೂರು ದಸರಾ ಜಂಬೂ ಸವಾರಿ ಉತ್ಸವವನ್ನು, ಮಾರಣಾಂತಿಕವಾಗಿ ಪರಿಣಮಿಸಿದ ಕೊರೋನಾ ಕಾರಣದಿಂದಾಗಿ ಸರಳವಾಗಿ ಆಚರಿಸಲಾಯಿತು. ಈ ಬಾರಿಯ ದಸರಾ ಉತ್ಸವದಲ್ಲಿ ಕೊರೊನಾ ಅದ್ಧೂರಿ ಆಚರಣೆಗೆ ತಡೆ ಇರುವುದರಿಂದ ಕೇವಲ ಎರಡೇ ಸ್ಥಬ್ದಚಿತ್ರವನ್ನು ತಯಾರಿಸಲಾಗಿತ್ತು. ಜಗತ್ತಿನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಮತ್ತು ಸಾಮಾಜಿಕ ನ್ಯಾಯದ ಹರಿಕಾರ, ನವ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವುಳ್ಳ ಆನೆಬಂಡಿ ಸ್ತಬ್ಧಚಿತ್ರಗಳು ಆಕರ್ಷಣೆಯಾಗಿದ್ದವು.

ಇದನ್ನೂ ಓದಿರಿ: ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವ ದಿಲೀಪ್ ರೇಗೆ 3 ವರ್ಷಗಳ ಜೈಲು ಶಿಕ್ಷೆ

ಕೊರೊನಾ ಸ್ತಬ್ಧಚಿತ್ರ

ಮೈಸೂರು ಜಿಲ್ಲಾ ಪಂಚಾಯಿತಿ ಕೊರೊನಾ ಕುರಿತು ಜನಜಾಗೃತಿ ಮೂಡಿಸುವ ಸ್ತಬ್ಧಚಿತ್ರ ರೂಪಿಸಿತ್ತು. ಕೋವಿಡ್‌-19 ಸೋಂಕನ್ನು ನಿಯಂತ್ರಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಸೇವೆಯ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಈ ಸ್ಥಬ್ದಚಿತ್ರವನ್ನು ಮೆರವಣಿಗೆಯಲ್ಲಿ ಕರೆದೊಯ್ಯುವ ಮೂಲಕ ದೇಶದ ಮತ್ತು ರಾಜ್ಯದ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಾಯಿತು. ಇದಲ್ಲದೇ ಈ ಬಾರಿಯ ದಸರಾ ಉದ್ಘಾಟನೆಯನ್ನು ಖ್ಯಾತ ಹೃದಯ ವೈದ್ಯ ಡಾ.ಸಿ.ಎನ್.ಮಂಜುನಾಥ್ ಅವರು ಉದ್ಘಾಟಿಸಿದ್ದರು. ಇದರೊಂದಿಗೆ ವೈದ್ಯರು ಸೇರಿ ಐವರು ಕೊರೊನಾ ವಾರಿಯರ್ಸ್ ರನ್ನು ಸನ್ಮಾನಿಸಲಾಗಿತ್ತು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here