ಶಾರೀಖ್ ಕುರಿತು ಡಿಕೆಶಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

home-minister-araga-jnanendra-condemns-dks-statement

ಬೆಂಗಳೂರು: ಮಂಗಳೂರು ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶರೀಕ್ ನನ್ನು ತನಿಖೆ ನಡೆಸದೆ ಉಗ್ರ ಎಂದು ಹೇಳಲಾಗಿದೆ ಎಂಬ ಡಿಕೆಶಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಡಿಕೆಶಿ ಮಂತ್ರಿಯಾದ್ದವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿಯ ಹೇಳಿಕೆ ನೀಡಬಾರದು’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಮಂತ್ರಿ ಆರಗ ಜ್ಞಾನೇಂದ್ರ, ‘ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು, ಡಿಕೆಶಿ ಮಂತ್ರಿಯಾದವರು , ಈ ವಿಚಾರ ಕೇಳಿ ಬಹಳ ನೋವಾಯಿತು ಎಂದು ಹೇಳಿದ್ದಾರೆ. ದೇಶದ ಆಂತರಿಕ ಭದ್ರತೆ ವಿಚಾರ, ಡಿಕೆಶಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಜವಾಬ್ದಾರಿ ಸ್ಥಾನದಲ್ಲಿರುವ ಡಿಕೆ ಶಿವಕುಮಾರ್ ಇಂತಹ ಹೇಳಿಕೆ ನೀಡಬಾರದು’ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ್ದ ಡಿಕೆಶಿ, ಮಂಗಳೂರಿನ ಕುಕ್ಕರ್ ಸ್ಫೋಟ ಪ್ರಕರಣ ಮುಂಬೈ ಅಟ್ಯಾಕ್ ಅಥವಾ ಪುಲ್ವಾಮಾ ಘಟನೆಯಂತೆ ಆಗಲಿಲ್ಲ, ಬಿಜೆಪಿಯವರು ಓಟರ್ ಐಡಿ ಹಗರಣವನ್ನು ಮುಚ್ಚಿಹಾಕಲು ಪ್ರಕರಣವನ್ನು ಹೈಲೈಟ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿರಿ: ಮಂಗಳೂರು ಕುಕ್ಕರ್‌ ಸ್ಫೋಟ: ಶಾರಿಕ್‌ ನನ್ನು ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ -ಡಿಕೆಶಿ ಪ್ರಶ್ನೆ 

LEAVE A REPLY

Please enter your comment!
Please enter your name here