heighlights-of-suresh-rainas-international-career

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಭಾರತ ತಂಡದ ಹಿರಿಯ ಆಟಗಾರ ಸುರೇಶ್ ರೈನಾ ಕೂಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಿವೃತ್ತಿಯ ಮಾಹಿತಿ ಹೇಳಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಸುದ್ದಿ ಕೇಳಿ ಕ್ರೀಕೆಟ್ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಗಿರುವುದು ಸುಳ್ಳಲ್ಲ.

33 ವರ್ಷದ ಎಡಗೈ ಬ್ಯಾಟ್ಸ್ ಮ್ಯಾನ್ ಸುರೇಶ್ ರೈನಾ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಟವಾಡಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಇವರ 13 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಕಳೆದೆರಡು ವರ್ಷಗಳಿಂದ ಭಾರತ ತಂಡಕ್ಕೆ ಆಯ್ಕೆಯಾಗದೇ, ಮುಂದೆ ಅವಕಾಶಗಳಿದ್ದರೂ ನೆಚ್ಚಿನ ಸ್ನೇಹಿತನ ನಿವ್ರತ್ತಿಯ ಜೊತೆಗೆ ತಮ್ಮ ನಿವ್ರತ್ತಿಯನ್ನೂ ಘೋಷಿಸಿದ್ದಾರೆ.

ವಯಕ್ತಿಕ ಜೀವನ

ಸುರೇಶ್ ರೈನಾ, ಇವರು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ, 1986 ನವೆಂಬರ್ 27 ರಂದು ಜನಿಸಿದರು. ಇವರ ತಂದೆ ತ್ರಿಲೋಕ ಚಂದ್ ನಿವೃತ್ತ ಸೇನಾ ಅಧಿಕಾರಿ. ಇವರಿಗೆ 2 ಹಿರಿಯ ಸಹೋದರರು ಮತ್ತು ಒಬ್ಬಳು ಅಕ್ಕ ಇದ್ದಾರೆ. ರೈನಾ 3 ಏಪ್ರಿಲ್ 2015 ರಂದು ಪ್ರಿಯಾಂಕಾ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿರಿ: ನೀವು ತಿಳಿದಿರದ ಎಂ ಸ್ ಧೋನಿಯ ಜೀವನ ಮತ್ತು ಕ್ರಿಕೆಟ್ ಇತಿಹಾಸ

heighlights-of-suresh-rainas-international-career

ಕ್ರಿಕೆಟ್ ಜೀವನದಲ್ಲಿನ ಕೆಲವು ಪ್ರಮುಖ ಸಾಧನೆಗಳು

 • ಸುರೇಶ್‌ ರೈನಾ 2005 ರಲ್ಲಿ ಭಾರತ ತಂಡಕ್ಕೆ ಸೇರ್ಪಡೆ ಗೊಂಡಿದ್ದರು. ಇವರು ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾರೆ.
 • 18 ಟೆಸ್ಟ್‌, 226 ಏಕದಿನ ಪಂದ್ಯ ಮತ್ತು 78 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ರೈನಾ, ಕ್ರಮವಾಗಿ 768, 5615 ಮತ್ತು 1605 ರನ್‌ಗಳನ್ನು ಗಳಿಸಿದ್ದಾರೆ.
 • 2008-2015, 2018 ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ ಹಾಗೂ 2016-2017 ರಲ್ಲಿ ಗುಜರಾತ್ ಲಯನ್ಸ್ ನಲ್ಲಿ ಐಪಿಲ್ ನಲ್ಲಿ ಆಡಿದ್ದಾರೆ.
 • ಜುಲೈ ಮತ್ತು ಆಗಸ್ಟ್ 2010 ರಲ್ಲಿ ರೈನಾ ಅವರನ್ನು ಶ್ರೀಲಂಕಾ ಪ್ರವಾಸಕ್ಕಾಗಿ ಟೆಸ್ಟ್ ತಂಡಕ್ಕೆ ಕರೆತರಲಾಯಿತು. ಯುವರಾಜ್ ಸಿಂಗ್ ಅನಾರೋಗ್ಯದ ನಂತರ ಎರಡನೇ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
 • ಸುರೇಶ್ ರೈನಾ ತಾವು ದಾಖಲಿಸಿದ 7 ಅಂತರಾಷ್ಟ್ರೀಯ ಶತಕಗಳು ವಿದೇಶಿ ನೆಲದಲ್ಲಿ ದಾಖಲಾಗಿವೆ.
 • 2011 ರಲ್ಲಿ ಭಾರತ ವಿಶ್ವಕಪ್ ಗೆಲುವಿಗೆ ಇವರರನ್ ಬಹಳಷ್ಟು ಸಹಕಾರಿ ಆಯಿತು.
 • ಕೇವಲ 66 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ದಾಖಲೆಯನ್ನು ಮಾಡಿದ್ದಾರೆ. ಈ ಮೊದಲು ವೀರೇಂದ್ರ ಸೆಹವಾಗ್ ಅವರು ತಮ್ಮ ಚೊಚ್ಚಲ ಶತಕವನ್ನು 69 ಎಸೆತಗಳಲ್ಲಿ ಪೂರೈಸಿ ದಾಖಲೆ ನಿರ್ಮಿಸಿದ್ದರು.
 • ಅಂತರಾಷ್ಟ್ರೀಯ ಟಿ-20 ಪಂದ್ಯವನ್ನು ಮುನ್ನಡೆಸಿದ ಅತ್ಯಂತ ಕಿರಿಯ ವಯಸ್ಸೀನ ಕ್ಯಾಪ್ಟನ್ ಎಂಬ ಕೀರ್ತಿಯನ್ನು ಪಡೆದಿದ್ದಾರೆ.
 • 2011 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೈನಾ ಗೆ ಕಾಪ್ಟನ್ ಸ್ಥಾನ ದೊರೆಯಿತು.
 • 13 ನೆ ಆವೃತ್ತಿಯ ಐಪಿಲ್ ನಲ್ಲಿ ಧೋನಿ ಜೊತೆ ರೈನಾ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲಿದ್ದಾರೆ ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ಸ್ಪಷ್ಟಪಡಿಸಿದ್ದಾರೆ.
 • ಅಂತರಾಷ್ಟ್ರೀಯ ಟಿ-20 ಕ್ರೀಕೆಟ್ ಪಂದ್ಯದಲ್ಲಿ ಭಾರತದ ಪರವಾಗಿ ಮೊದಲ ಶತಕ ಸಿಡಿಸಿದ ಕ್ರೀಕೆಟಿಗ ಮತ್ತು ಟಿ-20 ಯಲ್ಲಿ ಶತಕ ಸಿಡಿಸಿದ ಏಕಮಾತ್ರ ಭಾರತೀಯ ಕ್ರೀಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 • ಮೂರೂ ಮಾದರಿಯ ಕ್ರೀಕೆಟ್ ನಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

heighlights-of-suresh-rainas-international-career

ಜಾಹಿರಾತು ಕಂಪನಿಗಳ ಜೊತೆ ಒಪ್ಪಂದಗಳು

 • ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಸುರೇಶ್ ರೈನಾ ಸ್ಥಾನ ಪಡೆದಿದ್ದಾರೆ.
 • 2019 ರಲ್ಲಿ ಪ್ರಾಂಟೈನ್ ಇಂಡಿಯಾ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.
 • 2018 ರಲ್ಲಿ ಪಾದರಕ್ಷೆ, ಕ್ರೀಡಾ ಉಡುಪುಗಳ ತಯಾರಿಕಾ ಕಂಪನಿ ಎಸಿಕ್ಸ್ ಹಾಗೂ
 • 2017 ರಲ್ಲಿ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಗೆ ಜಾಹಿರಾತು ನೀಡಿದರು.
 • 2017 ರಲ್ಲಿ ಜಿಪಿ ಪೆಟ್ರೋಲಿಯಮ್ಸ್ ಲಿಮಿಟೆಡ್‌ನ ರೂಪಾಂತರವಾದ ಐಪಿಒಎಲ್ ಲೂಬ್ರಿಕಂಟ್‌ ಆಯ್ಕೆ ಮಾಡಿಕೊಂಡಿತು.
 • 2016 ರಲ್ಲಿ ಮೊಬೈಲ್ ತಯಾರಿಕಾ ಕಂಪನಿ ಇಂಟೆಕ್ಸ್ 2016 ರಲ್ಲಿ ಸ್ಪೋರ್ಟ್ ವೇರ್, ಶುದ್ಧ ಪ್ಲೇಗೆ ರಾಯಬಾರಿಯಾಗಿದ್ದಾರೆ.
 • 2015 ಟೈರ್ ಹಾಗೂ ಬ್ಯಾಟ್ ತಯಾರಿಕಾ ಕಂಪನಿ ಸಿಯೇಟ್ ಇವರನ್ನು ಆಯ್ಕೆಮಾಡಿಕೊಂಡಿತು.
 • 2010 ರಲ್ಲಿ ಎಚ್ ಪಿ ರೆಸರ್ ಹಾಗೂ ಎರ್ಸೆಲ್ ಇಂಡಿಯಾ ಜಾಹಿರಾತುಗಳಲ್ಲಿ ರೈನಾ ಕಾಣಿಸಿಕೊಂಡಿದ್ದರು.

ಇದನ್ನೂ ಓದಿರಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here