ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಮೂರು ಗೇಟ್ ಗಳ ಮೂಲಕ ಒಟ್ಟು 26,916 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ.
ಜಿಲ್ಲೆಯಾಧ್ಯಂತ ಕಳೆದ ಕೆಲದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅದರಲ್ಲಿಯೂ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಕದ್ರಾ ಜಲಾಶಯಕ್ಕೆ 27,107 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಇದರಿಂದಾಗಿ ತನ್ನ ಗರಿಷ್ಟ ತುಂಬಲು ಇನ್ನೇನು ಕೆಲವೇ ಸ್ಥಳಾವಕಾಶವಿದೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟ 34.50 ಮೀಟರ್ ಹೊಂದಿದ್ದು, ಈಗಾಗಲೇ 31.50 ಮೀಟರ್ ತಲಿಪಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ಮತ್ತು ಪ್ರವಾಹದ ಮುಂಜಾಗ್ರತಾ ಕ್ರಮವಾಗಿ 26,916 ಕ್ಯೂಸೆಕ್ಸ್ ನೀರನ್ನು ಜಲಾಶಯದ ಮೂರು ಗೇಟುಗಳ ಮೂಲಕ ಹೊರಬಿಡಲಾಗಿದೆ.
ಇದನ್ನೂ ಓದಿರಿ: ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ