health-minister-b-sriramulu-rejects-oppositions-allegation-of-corruption-in-purchase-of-medical-equipment

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊರೊನಾ ಹೆಸರಿನಲ್ಲಿ ಸರಕಾರ ಭಾರೀ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಸಂಪೂರ್ಣ ಲೆಕ್ಕವನ್ನು ನೀಡಿ “ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ” ಎಂದು ಹೇಳಿದ್ದಾರೆ.

ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮಲು, ಕೊರೊನಾ ಸೋಂಕಿನಂತಹ ಸಂಕಷ್ಟದ ಪರಿಸ್ಥಿತಿ ಉದ್ಬವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂತಹ ಪರಿಸ್ಥಿತಿಯು ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರುಗಳಿಗೆ ಸವಾಲಿನ ಕೆಲಸವಾಗಿದೆ. ಯಾವುದೇ ವಸ್ತುವಿನ ಬೇಡಿಕೆ ಹೆಚ್ಚಿರುವಾಗ ಪೂರೈಸುವವರು ಕಡಿಮೆಯಿರುತ್ತಾರೆ, ಪೂರೈಸುವವರು ಹೆಚ್ಚಿದಂತೆ ಬೇಡಿಕೆ ಕಡಿಮೆಯಾಗುತ್ತದೆ, ಅದಾದ ಬಳಿಕ ಅವುಗಳ ಬೆಲೆಯೂ ಕಡಿಮೆಯಾಗುತ್ತದೆ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅದಾದ ನಂತರ ವೆಂಟಿಲೇಟರ್ ಮತ್ತು ಇತರ ಉಪಕರಣಗಳ ಖರೀದಿಯಲ್ಲಿನ ಬ್ರಷ್ಟಾಚಾರದ ಆರೋಪ ಕುರಿತು ಮಾತನಾಡುತ್ತ, ವೆಂಟಿಲೇಟರ್ ಗಳನ್ನು ಅವುಗಳ ತಾಂತ್ರಿಕ ಶಕ್ತಿಯ ಆದಾರದ ಮೇಲೆ ಖರೀದಿಸಲಾಗುತ್ತದೆ, ಇಲ್ಲಿ ಕೇವಲ ಹಣವನ್ನು ಮಾತ್ರ ನೋಡಿ ಖರೀದಿಸುವುದಿಲ್ಲ. ವೆಂಟಿಲೇಟರ್ ಗಳು 4 ಲಕ್ಷದಿಂದ 60 ಲಕ್ಷಗಳವರೆಗೆ ವಿವಿಧ ಸ್ಥರಗಳಲ್ಲಿ ಅವುಗಳ ತಾಂತ್ರಿಕ ಶಕ್ತಿಯ ಮೇಲೆ ಖರೀದಿಸಬೇಕಾಗುತ್ತದೆ. ರಾಜ್ಯಸರಕಾರ ಕೊವಿಡ್ ಸಮಯದಲ್ಲಿ ಆರೋಗ್ಯ ಇಲಾಖೆಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪ ಆಕಾಶ-ಭೂಮಿಯಷ್ಟು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಇದನ್ನೂ ಓದಿರಿ:ಸೊಳ್ಳೆಗಳಿಂದ ಕೊರೊನಾ ವೈರಸ್ ಸೋಂಕು ಹರಡುತ್ತದೆಯೇ ? ತಜ್ಞರು ಹೇಳೋದೇನು ?

ಶ್ರೀರಾಮಲು ಅವರು ನೀಡಿರುವ ಮಾಹಿತಿ ಇಂತಿವೆ

  1. ಕೇಂದ್ರದಿಂದ ಉಚಿತವಾಗಿ ರಾಜ್ಯಸರಕಾರಕ್ಕೆ 640 ವೆಂಟಿಲೇಟರ್ ಗಳು ಬಂದಿದೆ. ನಂತರ ರಾಜ್ಯಸರಕಾರ ಮೈಸೂರಿನ ಸ್ಕಾನರ್ ಎಂಬ ಕಂಪನಿಯಿಂದ (5,60,000/1) 80 ವೆಂಟಿಲೇಟರ್ 7.28 ಕೋಟಿ ಗೆ ಖರೀದಿಸಲಾಗಿದೆ. ಐಸಿಯು ತಾಂತ್ರಿಕ ಶಕ್ತಿಇರುವ 28 ವೆಂಟಿಲೇಟರ್ ಗಳನ್ನು 3.33 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು 4 ಲಕ್ಷಕ್ಕೆ ಒಂದು ವೆಂಟಿಲೇಟರ್ ಲಭ್ಯವಿದೆ ಹಾಗಾಗಿ 40 ಕೋಟಿಗಳಷ್ಟು ವೆಚ್ಚವಾಗಬೇಕಿತ್ತು ಆದರೆ ಸರಕಾರ ಸುಮಾರು 120 ಕೋಟಿಗಳಷ್ಟು ವೆಚ್ಚಮಾಡಿದೆ ಎಂದು ಆರೋಪಿಸಿದ್ದರು.
  2. ಇನ್ನು ಪಿಪಿಇ ಕಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು, 4.89 ಕೋಟಿ ಪಿಪಿಇ ಕಿಟ್ ಗಳನ್ನ ಸರಕಾರ ಮಾರುಕಟ್ಟೆಯ ಬೆಲೆಯಂತೆ 48.65 ಕೋಟಿ ರೂಪಾಯಿಗೆ ಖರೀದಿಸಬಹುದಿತ್ತು ಆದರೆ ಸರಕಾರ 150 ಕೋಟಿ ವೆಚ್ಚವನ್ನು ಮಾಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ ಶ್ರೀರಾಮಲು, ಪಿಪಿಇ ಕಿಟ್ ಮೊದಲು ನಾಲ್ಕು ಕಂಪೋನೆಂಟ್ ಇರುವುದನ್ನು ಖರೀದಿಸಲಾಗಿತ್ತು ನಂತರ ಆರು ಕಂಪೋನೆಂಟ್ ಇರುವುದು ಅಗತ್ಯವಿದೆ ಎಂದರು. ನಂತರ 10 ಕಂಪೋನೆಂಟ್ ಇರುವ ಪಿಪಿಇ ಕಿಟ್ ಗಳನ್ನು ಚೀನಾ ಮತ್ತು ಸಿಂಗಾಪುರದಿಂದ ಖರೀದಿಸಲಾಯಿತು. ಮೊದಲಿದ್ದ ಬೆಲೆಯೂ ಈಗ ಬದಲಾಗಿದೆ. ಈವರೆಗೆ 9 ಲಕ್ಷದ 65 ಸಾವಿರ ಕಿಟ್ ಗಳನ್ನು ಖರೀದಿಸಿದ್ದೇವೆ ಎಂದು ತಿಳಿಸಿದರು. ನಾವು ಇಲ್ಲಿಯವರೆಗೆ ಒಟ್ಟು 79,35,16,816 ರೂಪಾಯಿ ವೆಚ್ಚ ಮಾಡಿದ್ದೇವೆ ಎಂದರು.
  3. ಹಾಗೆಯೇ N-95 ಮಾಸ್ಕ್ ಗಳನ್ನು ವಿವಿಧ ಕಂಪನಿಗಳಿಂದ 11,51,58,226 ವೆಚ್ಚದಲ್ಲಿ ಖರೀದಿಸಲಾಗಿದೆ.
  4. ಇನ್ನು ಸರ್ಜಿಕಲ್ ಗ್ಲೌಸ್ ವಿಚಾರದಲ್ಲೂ ಅವ್ಯವಹಾರ ನಡೆದಿದೆ ಅಂತಾರೆ, 9.50 ರೂಪಾಯಿಯಂತೆ 30 ಸಾವಿರ ಸರ್ಜಿಕಲ್ ಗ್ಲೌಸ್ ಗಳನ್ನು 28 ಲಕ್ಷದ 50 ಸಾವಿರ ವೆಚ್ಚದಲ್ಲಿ ಖರೀದಿಸಿದ್ದೇವೆ ಎಂದು ತಿಳಿಸಿದರು.
  5. ಸ್ಯಾನಿಟೈಸರ್ ಗಳನ್ನು ಕೇಂದ್ರ ಸರಕಾರದ ಪಟ್ಟಿಯಲ್ಲಿರುವ ಕಂಪನಿಗಳಿಂದ ಖರೀದಿಸಲಾಗಿದೆ. 500 ml ನ ಬಾಟಲಿಗಳನ್ನು 2,65,80,000 ರೂಪಾಯಿಗಳ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. ಇದಲ್ಲದೆ ವಿವಿಧ ಸಕ್ಕರೆ ಕಂಪನಿಗಳಿಂದ ಸ್ಯಾನಿಟೈಸರ್ ಗಳನ್ನು ಪಡೆದುಕೊಳ್ಳಲಾಗಿದೆ.

ಒಟ್ಟಾರೆಯಾಗಿ ನಮ್ಮ ಸರಕಾರದಿಂದ ಆರೋಗ್ಯ ಇಲಾಖೆಗೆ 290,60,12,597.96 ರೂಪಾಯಿಗಳ ವೆಚ್ಚದಲ್ಲಿ ವಿವಿಧ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಅವ್ಯವಹಾರ ನಡೆದಿರುವ ಕುರಿತು ಸಿದ್ದರಾಮಯ್ಯ ಹೇಳಿರುವುದನ್ನು  ಸಾಬೀಸಾಬೀತು ಪಡಿಸಿದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here