ಕೇಂದ್ರ ಸರಕಾರ ಭಾರತದಲ್ಲಿ ಇ-ಸಿಗರೇಟನ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಕಾನೂನನ್ನು ಜಾರಿಗೆ ತಂದಿದೆ. ಕಾರಣ ದೂಮಪಾನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಿಂದ ಕೇವಲ ದೂಮಪಾನ ಮಾಡುವವನಿಗೆ ಮಾತ್ರವಲ್ಲದೆ ಹತ್ತಿರದಲ್ಲಿರುವವರಿಗೂ ಅಪಾಯವನ್ನು ತಂದೊಡ್ಡುತ್ತದೆ. ನಾವೆಲ್ಲಾ ಬೀಡಿ,ಸಿಗರೇಟು ಇವುಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ ಆದರೆ ಈ ಇ-ಸಿಗರೇಟ್ ಎಂದರೇನು ಎಂದು ನೀಮಗೂ ಕೂಡ ಪ್ರಶ್ನೆ ಎದ್ದಿರಬಹುದಲ್ಲವೇ…
ಕೇಂದ್ರ ಸರಕಾರ ಇದನ್ನು ನಿಷೇಧಿಸಿ ಆದೇಶವನ್ನು ಮಾತ್ರ ಹೊರಡಿಸಿ ಬಿಟ್ಟಿಲ್ಲ, ಅದನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ಸಹ ನೀಡಲಾಗುತ್ತದೆ. ಅಪರಾದ ಮಾಡಿದ ಮೊದಲ ಬಾರಿಗೆ ಒಂದು ವರ್ಷದ ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡ ಅಥಾವಾ ಎರಡೂ ಮತ್ತು ಪುನರಾವರ್ತಿತ ಅಪರಾದಕ್ಕೆ 3 ವರ್ಷ ಅಥವಾ 5 ಲಕ್ಷ ರೂ. ಗಳ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಈ ನಿರ್ಧಾರ ಬಂದ ನಂತರ ಅನೇಕ ಜನರು ಮೊದಲ ಬಾರಿಗೆ ಇ-ಸಿಗರೇಟ್ ಹೆಸರನ್ನು ಕೇಳಿದರು ಮತ್ತು ಕೆಲವರು ಹೆಸರನ್ನು ಕೇಳಿದ್ದರು ಆದರೆ ಅದು ಏನು ಎಂದು ತಿಳಿದಿರಲಿಲ್ಲ. ಇಂದು ನಾವು ಹೇಳುತ್ತೇವೆ ಮತ್ತು ಅದನ್ನು ಏಕೆ ನಿಷೇಧಿಸಲಾಯಿತು ಎಂದೂ ತಿಳಿಸುತ್ತೇವೆ.

ಏನಿದು ಇ-ಸಿಗರೇಟು ?
ಇ-ಸಿಗರೇಟ್ ಎನ್ನುವುದು ನಿಕೋಟಿನ್ ಮತ್ತು ಇತರ ರಾಸಾಯನಿಕ ದ್ರವ್ಯಗಳಿಂದ ತುಂಬಿದ ಒಂದು ರೀತಿಯ ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದು ನೋಡಲು ಸಾಮಾನ್ಯ ಸಿಗರೇಟಿನಂತೆ ಕಾಣುತ್ತದೆ ಆದರೆ ಇದು ಬ್ಯಾಟರಿ ಚಾಲಿತವಾಗಿದೆ. ನಾವು ಇದನ್ನು ಪುನಃ ತುಂಬಿಸಬಹುದು ಮತ್ತು ಮರುಬಳಕೆ ಮಾಡಬಹುದು. ಇದರಿಂದ ಯಾವುದೇ ರೀತಿಯ ಹೊಗೆ ಬರುವುದಿಲ್ಲ, ಆದರೆ ಕಂಡಿತವಾಗಿಯೂ ಅನುಭವವನ್ನು ನೀಡುತ್ತದೆ. ಆರಂಭದಲ್ಲಿ ಇದನ್ನು ಸಿಗರೇಟಿಗಿಂತ ಕಡಿಮೆಹಾನಿಕಾರಕ ಎಂದು ಹೇಳಲಾಗುತ್ತಿತ್ತು. ಅದರ ನಂತರ ಯುವಕರಲ್ಲಿ ಅದರ ವ್ಯಾಮೋಹ ಹೆಚ್ಚಾಯಿತು.
ಭಾರತದಲ್ಲಿ ಇ-ಸಿಗರೇಟ್ ಬಳಕೆ ಇನ್ನೂ ಕಡಿಮೆಯೇ. ಇ-ಸಿಗರೇಟನ್ನು ಚೀನಾದಲ್ಲಿ ವ್ಯಾಪಕವಾಗಿ ತಯಾರಿಸಲಾಗುತ್ತದೆ ಮತ್ತು ಅಲ್ಲಿಂದ ವಿಶ್ವದ ಹಲವು ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದಲ್ಲದೇ ಈ ಮೊದಲು ಆನ್ ಲೈನ್ ನಲ್ಲಿಯೂ ಲಭ್ಯವಿತ್ತು. ಆನ್ ಲೈನ್ ಸೈಟ್ ಗಳಾದ esutta.com ಮತ್ತು freesmoke.com ಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇತ್ತೀಚಿಗೆ ಇ-ಸಿಗರೇಟ್ ಅನೇಕ ರುಚಿಗಳಲ್ಲಿ ಬರಲು ಪ್ರಾರಂಭಿಸಿತ್ತು. ಇದನ್ನು ನಿಷೆಧಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುತ್ತ, 150ಕ್ಕೂ ಹೆಚ್ಚು ರುಚಿಯ 400 ಬಗೆಯ ಇ-ಸಿಗರೇಟ್ ಪತ್ತೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿರಿ: ತೇಜಸ್ ಯುದ್ಧ ವಿಮಾನ ಹತ್ತಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ..!

ಅದನ್ನು ಏಕೆ ನಿಷೇಧಿಸಲಾಯಿತು ?
ಇ-ಸಿಗರೇಟನ್ನು ಮಾತ್ರ ಏಕೆ ನಿಷೇಧಿಸಲಾಗಿದೆ, ಬೀಡಿ ಮತ್ತು ಸಿಗರೇಟ್ ಏಕೆ ನಿಷೇಧಿಸಿಲ್ಲ ಎಂಬ ದೊಡ್ಡ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆರಂಭದಲ್ಲಿ ಜನರು ಸಿಗರೇಟಿನ ಚಟವನ್ನು ಬಿಡಲು ಇದನ್ನು ಬಳಸುತ್ತಿದ್ದರು. ಆದರೆ ನಂತರ ಇದು ಸಾಮಾನ್ಯ ಸಿಗರೇಟಿಗಿಂತ ಹೆಚ್ಚು ಹಾನಿಕರ ಎಂದು ತಿಳಿದುಬಂದಿತು. ಇ-ಸಿಗರೇಟ್ ಸಾಮಾನ್ಯ ಸಿಗರೇಟಿಗಿಂತ ಶ್ವಾಸ ಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರ ಬಳಕೆಯಿಂದ ಕ್ಯಾನ್ಸರ್, ಶ್ವಾಸಕೋಶದ ಸೋಂಕಿನ ಜೊತೆಗೆ ಅನೇಕ ಗಂಭೀರ ರೋಗಗಳು ಬರುತ್ತವೆ. ಇ-ಸಿಗರೇಟ್ ನ ಬಳಕೆಯಿಂದ ಡಿ ಏನ್ ಎ ಮೇಲೆ ಮತ್ತು ಭ್ರೂಣದ ಮೇಲೆಯೂ ಪರಿಣಾಮಗಳಾಗುತ್ತವೆ. ಇ-ಸಿಗರೇಟ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಬ್ಲ್ಯು ಹೆಚ್ ಓ ಈಗಾಗಲೇ ಹಲವಾರು ದೇಶಗಳಿಗೆ ಪತ್ರವನ್ನೂ ಬರೆದಿದೆ. ಇ-ಸಿಗರೇಟ್ ನಿಷೇಧಿಸಬೇಕೆಂದು ಭಾರತೀಯ ಆರೋಗ್ಯ ಸಚಿವಾಲಯವೂ ಸತತವಾಗಿ ಹೇಳಿಕೊಂಡು ಬಂದಿತ್ತು. ಇ-ಸಿಗರೇಟನ್ನು ಅಮೇರಿಕಾದ ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಆದರೆ ಇ-ಸಿಗರೇಟನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಇಂದು ಪಾತ್ರವಾಯಿತು.
ಇದನ್ನೂ ಓದಿರಿ: ಪ್ರಧಾನಿ ಮೋದಿಯವರಿಗೆ ಸಿಕ್ಕ ಗಿಪ್ಟ್ ಗಳನ್ನು ನೀವು ಪಡೆದುಕೊಳ್ಳಬಹುದು..!