mla-h-vishwanath-says-cm-should-change-in-karnataka-let-lingayat-community-leader-be-cm

ಬೆಂಗಳೂರು: ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ ವಿಶ್ವನಾಥ್, “ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗಿದೆ, ಸಿ ಎಂ ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆಯಲ್ಲಿ ಮಾತನಾಡಿ, ಜೆಡಿಎಸ್ ನಲ್ಲಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿಯೂ ನೋಡಿದ್ದೇನೆ. ಅಧಿಕಾರದ ಅಪೇಕ್ಷೆಗಾಗಿ ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ನನಗೆ ರಾಜ್ಯ ಮುಖ್ಯ ಮತ್ತು ಆಡಳಿತ ಮುಖ್ಯ ಈ ಕುರಿತು ಅರುಣ್ ಸಿಂಗ್ ಅವರ ಜೊತೆಯಲ್ಲಿ ಮಾತನಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿರಿ: ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಯಡಿಯೂರಪ್ಪನವರಲ್ಲಿ ಹಿಂದಿನ ವರ್ಚಸ್ಸು ಕಾಣುತ್ತಿಲ್ಲ, ಅವರ ವೇಗ, ಪ್ರಭಾವ ಮಬ್ಬಾಗುತ್ತಿದೆ. ಯಡಿಯೂರಪ್ಪನವರು ಹೈಕಮಾಂಡ್ ಹೇಳಿದರೆ ರಾಜಿನಾಮೆಗೆ ಸಿದ್ದ ಎಂದು ಹೇಳಿದ್ದಾರೆ. ಅವರು ಮಾರ್ಗದರ್ಶಕರಾಗಿದ್ದು, ಅವರ ಸ್ಥಾನಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರೊಬ್ಬರನ್ನು ನೇಮಿಸಿ ಒಗ್ಗಟ್ಟಿನಿಂದ ಸಾಗಿದರೆ ಬಿಜೆಪಿಗೆ ಮುಂದೆ ಭವಿಷ್ಯವಿದೆ ಎಂದು ತಿಳಿಸಿದರು.

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗ್ತಿದೆ. ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಹೋಗುತ್ತಿದೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ. ರಾಜ್ಯಸರ್ಕಾರ ಮೋದಿಯವರನ್ನು ಸಂಪೂರ್ಣ ಮರೆತಿದೆ ಎಂದು ಹೇಳಿದ್ದೇನೆ ಎಂದು ಹೆಚ್ ವಿಶ್ವನಾಥ್ ಸುದ್ದಿಗಾರರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here