ಗುಜರಾತ್: ಗುಜರಾತ್ ವಿಧಾನಸಭೆಗೆ ಚುನಾವಣೆ ನಿನ್ನೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೈಕ್ಷೆಗಳು (Gujarat Exit Poll Result) ಹೊರಬಿದ್ದಿವೆ. ಈ ಬಾರಿಯೂ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಹಿತಿ ನೀಡಿವೆ.
ಕಳೆದ 27 ವರ್ಷಗಳಿಂದ ಬಿಜೆಪಿ ಗುಜರಾತ್ನಲ್ಲಿ ಅಧಿಕಾರದಲ್ಲಿದೆ. 1995 ರಿಂದ ನಡೆದ 6 ಚುನಾವಣೆಗಳಲ್ಲಿ ಕಮಲ ಅರಳುತ್ತಲೇ ಇದೆ. ಮೋದಿ ಪ್ರಧಾನಿಯಾದ ಬಳಿಕ ನಾಯಕತ್ವದ ಕೊರತೆ ಅನುಭವಿಸಿದರೂ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡಿದ್ದು ಬಿಜೆಪಿಗೆ ನೆರವಾಗಿದೆ.
ಒಟ್ಟು 182 ಸ್ಥಾನಗಳಿದ್ದು ಸರಳ ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದೆ. ಗುಜರಾತ್ ಚುನಾವಣೆಯ ಫಲಿತಾಂಶ ಡಿ.8 ರಂದು ಪ್ರಕಟವಾಗಲಿದೆ.
ಇದನ್ನೂ ಓದಿರಿ: ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು; ಮೊದಲ ಬಾರಿಗೆ ಸರ್ಕಾರಿ ವೈದ್ಯರಾಗಿ ನೇಮಕ!
ಇಂಡಿಯಾ ಟಿವಿ
- ಬಿಜೆಪಿ: 109 ರಿಂದ 124 ಸ್ಥಾನ
- ಕಾಂಗ್ರೆಸ್: 51 ರಿಂದ 66 ಸ್ಥಾನ
- ಎಎಪಿ: 0 ರಿಂದ 7 ಸ್ಥಾನ
ಜನ್ ಕೀ ಬಾತ್
- ಬಿಜೆಪಿ: 125 ರಿಂದ 130 ಸ್ಥಾನ
- ಕಾಂಗ್ರೆಸ್: 40 ರಿಂದ 50 ಸ್ಥಾನ
- ಎಎಪಿ: 3 ರಿಂದ 5 ಸ್ಥಾನ
ರಿಪಬ್ಲಿಕ್ ಟಿವಿ
- ಬಿಜೆಪಿ: 128 ರಿಂದ 140 ಸ್ಥಾನ
- ಕಾಂಗ್ರೆಸ್: 20 ರಿಂದ 42 ಸ್ಥಾನ
- ಎಎಪಿ: 2 ಯಿಂದ 10 ಸ್ಥಾನ
ನ್ಯೂಸ್ ಎಕ್ಸ್
- ಬಿಜೆಪಿ: 117 ರಿಂದ 140 ಸ್ಥಾನ
- ಕಾಂಗ್ರೆಸ್: 34 ರಿಂದ 51 ಸ್ಥಾನ
- ಎಎಪಿ: 6 ರಿಂದ 13 ಸ್ಥಾನ
- ಇತರರು: 1 ರಿಂದ 2 ಸ್ಥಾನ
ಇದನ್ನೂ ಓದಿರಿ: Farooq Abdullah: ಭಾರತೀಯ ಸೇನೆ ಮೇಲೆ ಗಂಭೀರ ಆರೋಪ ಮಾಡಿದ ಫಾರೂಕ್ ಅಬ್ದುಲ್ಲಾ