ಎಲೆಚುಕ್ಕೆ ರೋಗದ ಖರ್ಚನ್ನು ಸರಕಾರವೇ ಭರಿಸಲಿದೆ – ಮುಖ್ಯಮಂತ್ರಿ ಬೊಮ್ಮಾಯಿ  

govt-ready-to-take-steps-to-check-spreading-of-pest-to-the-commercial-crops

ಶಿವಮೊಗ್ಗ: ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ತಡೆಗಟ್ಟುವಿಕೆಗೆ ಸರಕಾರ ಸಹಾಯ ಮಾಡಲಿದೆ. ಈಗಾಗಲೇ ರೋಗ ತಡೆಗಟ್ಟಲು ಸರಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ.

ತೀರ್ಥಹಳ್ಳಿಯಲ್ಲಿನ ಮುಳಬಾಗಿಲು ವ್ಯಾಪ್ತಿಯ ಕೈಮರ ಗ್ರಾಮದ ಹರೀಶ್ ಎಂಬುವವರ ತೋಟಕ್ಕೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿನೀಡಿದ್ದರು. ಹರೀಶ್ ಅವರ ಎರಡು ಎಕರೆ ತೋಟ ಎಲೆಚುಕ್ಕೆ ರೋಗದಿಂದ ನಾಶವಾಗಿತ್ತು. ರೋಗ ತಡೆಗಟ್ಟಲು ಸರಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಲ್ಲದೇ ರೋಗ ನಿವಾರಣೆಗೆ ತಗಲುವ ವೆಚ್ಚವನ್ನೂ ಭರಿಸಲಿದೆ ಎಂದು ಈ ಸಮಯದಲ್ಲಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ.

ಎಲೆ ಚುಕ್ಕೆ ರೋಗದ ಕುರಿತಂತೆ ತಜ್ಞರು ಹಾಗೂ ವಿಜ್ಞಾನಿಗಳು ಪರಿಶೀಲನೆಯನ್ನು ನಡೆಸಿದ್ದಾರೆ. ಈ ರೋಗವು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಗಾಳಿಯ ಮೂಲಕ ಹರಡುತ್ತದೆ. ಸುಮಾರು 45 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ರೋಗ ಹರಡದಂತೆ ತಡೆಗಟ್ಟಲು ಎಷ್ಟೇ ಖರ್ಚಾದರೂ ಸರಕಾರ ಭರಿಸಲಿದೆ. ಅಡಿಕೆ ಬೆಳೆಗಾರರು ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಇದನ್ನೂ ಓದಿರಿ: Indian Navy Recruitment: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ

LEAVE A REPLY

Please enter your comment!
Please enter your name here