govt-orders-to-re-implement-yashaswini-yojana

ಬೆಂಗಳೂರು: ಬಡವರ ಪಾಲಿಗೆ ಆರೋಗ್ಯ ಸಂಜೀವಿನಿ ಎಂದೇ ಜನಪ್ರಿಯವಾಗಿರುವ ಯಶಸ್ವಿನಿ ಯೋಜನೆ ಮರುಜಾರಿಗೆ ಬುಧವಾರ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಕನ್ನಡ ರಾಜ್ಯೋತ್ಸವ ದಿನದಿಂದ ಸಾರ್ವಜನಿಕರಿಗೆ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಳ್ಳವು  ಅವಕಾಶ ದೊರಕಲಿದೆ.

ಯಶಸ್ವಿನಿ ಯೋಜನೆ ಮರು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಪ್ರಕಟಿಸಿ, ಇದಕ್ಕಾಗಿ ಬಜೆಟ್​ನಲ್ಲಿ 300 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರು. ಅ. 2ರಂದು ಚಾಲನೆ ನೀಡಲು ಉದ್ದೇಶಿಸಲಾಗಿದ್ದರೂ, ತಾಂತ್ರಿಕ ಕಾರಣಕ್ಕಾಗಿ ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜ್ಯೋತ್ಸವದಂದು ಜಾರಿ ಮಾಡುವುದಾಗಿ ತಿಳಿಸಲಾಗಿತ್ತು.

ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ (2003) ಜಾರಿಗೆ ಬಂದಿದ್ದ ಯಶಸ್ವಿನಿ ಯೋಜನೆಯನ್ನು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್​ಕುಮಾರ್ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಯೋಜನೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಲಾಗಿದ್ದು, ಹೆಚ್ಚು ಸೌಲಭ್ಯವನ್ನು ಈ ಯೋಜನೆಯ ವ್ಯಾಪ್ತಿಗೆ ತಂದಿರುವುದು ವಿಶೇಷ. ಸದ್ಯ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿರಿ: ಸುಪ್ರೀಂಕೋರ್ಟ್​ನಿಂದ ಹಿಜಾಬ್ ಕುರಿತು ವಿಭಜಿತ ತೀರ್ಪು, ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ

ಈ ಯೋಜನೆಯಲ್ಲಿ ಕುಟುಂಬವನ್ನು ಸೇರ್ಪಡೆ ಮಾಡಲು ಮಾಹಿತಿ 

ಈ ಯೋಜನೆಯಲ್ಲಿ ಕುಟುಂಬದ ನಾಲ್ಕು ಜನರಿಗೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಸದಸ್ಯರಿಗೆ 500 ರೂ ಹಾಗೂ ನಗರ ಪ್ರದೇಶದವರಿಗೆ 1,000 ರೂ ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚುವರಿ ಕುಟುಂಬ ಸದಸ್ಯರಿದ್ದಲ್ಲಿ ಶೇ.20ರಷ್ಟು ಹೆಚ್ಚಳ ಅಂದರೆ, ಗ್ರಾಮೀಣರಿಗೆ ತಲಾ 100 ರೂ, ನಗರದವರಿಗೆ 200 ರೂ. ಪಾವತಿಸಬೇಕಿದೆ. ಎಸ್​ಸಿ ಮತ್ತು ಎಸ್​ಟಿ ವರ್ಗದ ಶುಲ್ಕಕ್ಕೆ ರಿಯಾಯಿತಿ ನೀಡಿದ್ದು, ಅದನ್ನು ಸರ್ಕಾರವೇ ಭರಿಸಲಿದೆ.

ಯಶಸ್ವಿನಿ ಕಾರ್ಡ್ ಪಡೆದ ಬಳಿಕ 15 ದಿನಗಳ ನಂತರ ಈ ಯೋಜನೆಯ ಸೌಲಭ್ಯವನ್ನು ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಸರ್ಕಾರಿ ನೌಕರರಾಗಿದ್ದರೆ, ಖಾಸಗಿ ಕಂಪನಿಯಲ್ಲಿ ವೇತನ ಪಡೆಯುತ್ತಿದ್ದರೆ, ಯಾವುದೇ ವಿಮಾ ಯೋಜನೆಯಲ್ಲಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿರಿ: ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆಗೆ ಹಸಿರು ನ್ಯಾಯ ಮಂಡಳಿ ತಡೆ

ಯಶಸ್ವಿನಿ ಯೋಜನೆಯಲ್ಲಿ ಈ ಹಿಂದೆ ಇದ್ದ ಗರಿಷ್ಠ 2 ಲಕ್ಷ ರೂ. ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಆದರೆ, ಒಂದು ಕುಟುಂಬದಲ್ಲಿ ನಾಲ್ಕು ಜನರು ಸೇರಿದಂತೆ 5 ಲಕ್ಷಕ್ಕೆ ಮೀರದಂತೆ ಮಾತ್ರ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವ ನಿರ್ಬಂಧ ವಿಧಿಸಲಾಗಿದೆ. ಕುಟುಂಬದಲ್ಲಿ ಒಬ್ಬರೇ 5 ಲಕ್ಷ ರೂ.ತನಕ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಒಂದು ವರ್ಷದೊಳಗೆ ಒಮ್ಮೆ ಈ ಸೌಲಭ್ಯ ಪಡೆಯಬಹುದು.

ಯೋಜನೆಯ ಫಲಾಭವಿಯಾಗಲು ಇರಬೇಕಾದ ಅರ್ಹತೆಗಳೇನು?

ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.

ಇದನ್ನೂ ಓದಿರಿ: ಭಾರತಕ್ಕೆ ಆಸ್ಟ್ರೇಲಿಯಾ ಪ್ರಮುಖ ಪಾಲುದಾರ ರಾಷ್ಟ್ರ- ಜೈಶಂಕರ್‌

govt-orders-to-re-implement-yashaswini-yojana

govt-orders-to-re-implement-yashaswini-yojana

govt-orders-to-re-implement-yashaswini-yojana

govt-orders-to-re-implement-yashaswini-yojana

ಇದನ್ನೂ ಓದಿರಿ: 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here