ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ‘ಆರೋಗ್ಯ ಸೇತು’ ಎಂಬ ಮೊಬೈಲ್ ಆಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಷನ್ ಇಂಗ್ಲಿಷ್, ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಲಭ್ಯವಿದೆ. ಇದರಲ್ಲಿ ಕರೊನಾ ಗೆ ಸಂಬಂಧಿಸಿದ ಮಾಹಿತಿಗಳ ಜೊತೆಯಲ್ಲಿ ಸೋಂಕಿತ ವ್ಯಕ್ತಿ ಮತ್ತು ಇರತ ಅಗತ್ಯ ಮಾಹಿತಿಗಳನ್ನು ಅಪ್ಡೇಟ್ ಮಾಡಲಾಗುತ್ತದೆ.
ಈ ಅಪ್ ಕರೊನಾ ರೋಗಿಗಳ ಕುರಿತು ಮುನ್ನೆಚ್ಚರಿಕೆ ನೀಡಲಿದ್ದು, ಹತ್ತಿರದಲ್ಲಿ ಯಾರಾದರು ಸೋಂಕಿತ ವ್ಯಕ್ತಿ ಇದ್ದಲ್ಲಿ ಸಂದೇಶವನ್ನು ನೀಡುತ್ತದೆ. ಅಲ್ಲದೇ ಸೋಂಕಿತ ವ್ಯಕ್ತಿಗಳ ಮಾಹಿತಿಯನ್ನು ಶಿಗ್ರವಾಗಿ ಅಪ್ಡೇಟ್ ಮಾಡುತ್ತಾ ಇರುವುದರಿಂದ ಕರೊನಾ ಹರಡುತ್ತಿರುವ ಹಾಗೂ ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ,ಮಾಹಿತಿಯೂ ದೊರೆಯುತ್ತದೆ. ಸದ್ಯ ಸರಕಾರ ಜನರಿಗೆ ಕರೊನಾ ಕುರಿತು ಮಾಹಿತಿಯನ್ನು
ನೀಡಲು ತಯಾರಿಸಲಾದ ಉಪಯುಕ್ತವಾದ ಆಪ್ ಇದಾಗಲಿದೆ ಎಂದು ಹೇಳಲಾಗುತ್ತಿದ್ದು, ಇದರ ನಿಖರತೆಯ ಕುರಿತು ಇನ್ನಷ್ಟೇ ತೀಳಿಯಬೇಕಾಗಿದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿದ್ದು, ಜನರಿಂದ ಯಾವರೀತಿಯ ರೆಸ್ಪಾನ್ಸ್ ಬರುತ್ತದೆ ಎಂದು ಸರಕಾರ ಕಾದು ನೋಡುತ್ತಿದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ಆರೋಗ್ಯ ಸೇತು ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳಿ. Download
ಇದನ್ನೂ ಓದಿರಿ : ಏಪ್ರಿಲ್.5 ರ ರಾತ್ರಿ ವಿದ್ಯುತ್ ದೀಪ ಆರಿಸಿ, 9 ನಿಮಿಷ ದೀಪ ಬೆಳಗಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ