government-wont-budge-an-inch-on-citizenship-amendment-act-says-amit-shah

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೋಧಪುರದಲ್ಲಿ ಇಂದು ಸ್ಪಷ್ಟ ಪಡಿಸಿದ್ದಾರೆ.

ವಿರೋಧ ಪಕ್ಷಗಳು ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದು, ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿವೆ. ದೇಶದಲ್ಲಿ ಈ ಕಾಯ್ದೆಯ ಕುರಿತಾಗಿ ಅಲ್ಪಸಂಖ್ಯಾತರಲ್ಲಿ ಭಯವನ್ನು ಹುಟ್ಟಿಸುತ್ತಿದ್ದಾರೆ. ಈ ಕಾಯ್ದೆಯ ಜಾರಿಯಿಂದ ಇಲ್ಲಿನ ವಾಸಿಗಳಾದ ಯಾವುದೇ ಅಲ್ಪಸಂಖ್ಯಾತರಿಗೂ ತೊಂದರೆ ಎದುರಾಗುವುದಿಲ್ಲ. ಅಲ್ಲದೇ ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಮುಸ್ಲಿಮೇತರರು 2015 ಕ್ಕೂ ಮೊದಲು ದೇಶಕ್ಕೆ ಬಂದಿದ್ದರೆ ಅವರಿಗೆ ಪೌರತ್ವವನ್ನು ನೀಡುವ ಕಾಯ್ದೆ ಇದಾಗಿದೆ ಎಂದು ತಿಳಿಸಿದರು.

ಶುಕ್ರವಾರ ರಾಜಸ್ಥಾನದ ಜೋಧಪುರದಲ್ಲಿ ಪೌರತ್ವ ಕಾಯ್ದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೃಹಸಚಿವ ಅಮಿತ್ ಷಾ ಅವರು ಮಾತನಾಡಿದರು. ಈ ಕಾಯ್ದೆಯು ಯಾವುದೇ ನಾಗರಿಕರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಬದಲಾಗಿ ಪೌರತ್ವವನ್ನು ನೀಡುವ ಸಲುವಾಗಿ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳು ಪೌರತ್ವ ಕಾಯ್ದೆಯ ವಿರುದ್ಧವಾಗಿ ಸುಳ್ಳು ಸುದ್ಧಿಯನ್ನು ಹರಡಿ ತಮ್ಮ ವೋಟ್ ಬ್ಯಾಂಕನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

LEAVE A REPLY

Please enter your comment!
Please enter your name here