nagara-panchami-festival-may-god-solves-all-issues--chief-minister-yeddyurappa

ಬೆಂಗಳೂರು: ಕೊರೊನಾ ಸಂಕಷ್ಟ ಹೆಚ್ಚಾಗುತ್ತಿರುವ ಕಾರಣಗಳಿಂದಾಗಿ ಅಗತ್ಯವಾದ ಹೆಚ್ಚುವರಿಯಾಗಿ 200 ಅಂಬುಲೆನ್ಸ್ ಖರೀದಿಗೆ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಹಲವು ಜಿಲ್ಲೆಗಳಲ್ಲಿ ವಿಪರೀತ ಹೆಚ್ಚಾಗಿದೆ. ಆಯಾ ಜಿಲ್ಲಾಧಿಕಾರಿಗಳಿ ಸೋಂಕು ಹರಡುವುದನ್ನು ತಡೆಗಟ್ಟಲು ಜವಾಬ್ದಾರಿ ನೀಡಲಾಗಿದೆ. ಹೀಗಿರುವಾಗಾ ಅಗತ್ಯ ಸೇವೆ ಒದಗಿಸಲು ಸಾಕಷ್ಟು ಅಂಬುಲೆನ್ಸ್ ಗಳ ಅವಶ್ಯಕತೆಯಿರುತ್ತದೆ. ಈ ಕೂಡಲೇ ಅಂಬುಲೆನ್ಸ್ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 400 ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನು 200 ಅಂಬುಲೆನ್ಸ್ ಗಳು ಹೆಚ್ಚುವರಿಯಾಗಿ ಸೇವೆಗೆ ಸಿಗಲಿವೆ.

LEAVE A REPLY

Please enter your comment!
Please enter your name here