ಮುಂಬೈ: ಇಂದಿನಿಂದ 2020-21 ನೇ ಸಾಲಿನ ಏಳನೇ ಸುತ್ತಿನ ಚಿನ್ನದ ಬಾಂಡಗಳ ಮಾರಾಟ ಪ್ರಾರಂಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಚಿನ್ನದ ಬಾಂಡುಗಳ ಮಾರಾಟದ ಏಳನೇ ಪ್ರಾರಂಭಿಸಲಿದ್ದು, ಅದು ಅಕ್ಟೋಬರ್ 11 ರಿಂದ ಅಕ್ಟೋಬರ್ 16 ರ ವರೆಗೆ ಲಭ್ಯವಾಗಲಿದೆ. ಪ್ರತಿಗ್ರಾಮ್ ಚಿನ್ನದ ಬ್ಯಾಂಡಿನ ಬೆಲೆ 5051 ರೂಪಾಯಿ ನಿಗದಿ ಮಾಡಲಾಗಿದೆ. ಆನ್ ಲೈನ್ ನಗದು ವ್ಯವಹಾರ ಮಾಡುವವರಿಗೆ ಪ್ರತಿಗ್ರಾಮ್ ಗೆ 50 ರೂಪಾಯಿಯ ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಏನಿದು ಚಿನ್ನದ ಬಾಂಡ್ ..?
ಚಿನ್ನದಲ್ಲಿ ಹೂಡಿಕೆ ಮಾಡುವವರು ಬೌತಿಕ ರೂಪದಲ್ಲಿ ಸಂಗ್ರಹಿಸಿ ಬಳಕೆಗೆ ಬಾರದೆ ಇರುವುದನ್ನು ತಡೆಗಟ್ಟಲು ಕೇಂದ್ರ ಸರಕಾರ 2015 ರಲ್ಲಿ ಚಿನ್ನದ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತು. ಈ ಬಾಂಡುಗಳು ಕೆಲವು ಆಯ್ದ ಬ್ಯಾಂಕುಗಳು, ಅಂಚೆ ಕಚೇರಿಗಳು , ಸ್ಟಾಕ್ ಹೋಲ್ಡಿಂಗ್ ಆಫ್ ಇಂಡಿಯಾ, ರಾಷ್ತ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.