ಕ್ಯಾನ್ಸರ್ ನಿಂದ ತೀವ್ರವಾಗಿ ಬಳಲುತ್ತಿದ್ದ ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸುಮಾರು ಒಂದು ವರ್ಷದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಗೋವಾ ಮೆಡಿಕಲ್ ಕಾಲೇಜೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

63 ವರ್ಷದ ಪರಿಕ್ಕರ್ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಧಕ್ಷ ಮತ್ತು ಉತ್ಸಾಹಿ ನಾಯಕರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಅಮೇರಿಕಾಗೆ ತೆರಳಿ 3 ತಿಂಗಳುಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಆದರೂ ಸಂಪೂರ್ಣವಾಗಿ ಗುಣವಾಗಿರಲಿಲ್ಲ. ಈ ಕಾರಣಕಾಗಿಯೇ ಅವರ ಮೂಗಿಗೆ ಪೈಪ್ ಅಳವಡಿಸಿದ್ದರು. ತೀವ್ರ ಅನಾರೋಗ್ಯದ ನಡುವೆಯೂ ಬಜೆಟ್ ಮಂಡಿಸಿ ಸುದ್ದಿಯಾಗಿದ್ದರು. ಸರಕಾರದ ಆಡಳಿತವನ್ನು ತಮ್ಮ ಮನೆಯಿಂದಲೇ ನಿರ್ವಹಿಸುತ್ತ ಬಂದಿದ್ದರು. ಮತ್ತೆ ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಆಸ್ಪತ್ರೆ ಸೇರಿದ್ದರು.

ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಬಿಜೆಪಿ ಮತ್ತು ದೇಶದ ಜನತೆ ಅಪಾರ ದುಃಖ ಸಾಗರದಲ್ಲಿ ಮುಳುಗಿದ್ದು, ಹಲವಾರು ಗಣ್ಯ ನಾಯಕರು ಕಂಬನಿ  ಮಿಡಿದಿದ್ದಾರೆ.

ಇದನ್ನೂ ಓದಿರಿ:

SPONSORED CONTENT

LEAVE A REPLY

Please enter your comment!
Please enter your name here