give-priority-to-2nd-dose-of-vaccine-due-centre-advises-states

ಕೊರೋನಾ ಲಸಿಕೆಗಳ ಬಳಕೆಯ ಸಂದರ್ಭದಲ್ಲಿ ಎರಡನೆಯ ಡೋಸ್ ಬಾಕಿ ಇರುವವರಿಗೆ ಮೊದಲ ಆದ್ಯತೆ ನೀಡಿ ಎಂದು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. ಇದಲ್ಲದೆ ಕೇಂದ್ರದಿಂದ ಸರಬರಾಜಾದ ಲಸಿಕೆಗಳಲ್ಲಿ ಕನಿಷ್ಠ 70% ಕಾಯ್ದಿರಿಸುವಂತೆ ಕೇಂದ್ರ ತಿಳಿಸಿದೆ.

ಕೋವಿಡ್ -19 ರ ವಿರುದ್ಧ ಹೋರಾಡಲು ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಉನ್ನತಾಧಿಕಾರ ಗುಂಪಿನ ಅಧ್ಯಕ್ಷರಾದ ರಾಜೇಶ್ ಭೂಷಣ್ ಮತ್ತು ಡಾ ಆರ್ ಎಸ್  ಶರ್ಮಾ ಅವರು ಲಸಿಕೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ಕರೆದ ಸಭೆಯಲ್ಲಿ ಲಸಿಕೆಯ ಎರಡನೆಯ ಡೋಸ್ ಬಾಕಿ ಇರುವವರಿಗೆ ಆದ್ಯತೆ ನೀಡುವಂತೆ ತಿಳಿಸಿದರು. ಇದಲ್ಲದೇ  ಲಸಿಕೆಯ ಡೋಸ್ ಗಳು ವ್ಯರ್ಥವಾಗುವುದನ್ನು ತಪ್ಪಿಸಲು ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.

ರಾಜ್ಯಗಳಿಗೆ ಸರಬರಾಜು ಮಾಡಲಾದ ಲಸಿಕೆಗಳಲ್ಲಿ 70;30 ರೀತಿಯಲ್ಲಿ ಬಳಕೆ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟ ಹೆಚ್ಚಿನ ನಾಗರೀಕರು ಲಸಿಕೆಯ ಮೊದಲ ಡೋಸನ್ನು ಪಡೆದುಕೊಂಡಿರುತ್ತಾರೆ. ಅಂಹವರಿಗೆ ಎರಡನೆಯ ಡೋಸ್ ನೀಡುವುದು ತುಂಬಾ ಅಗತ್ಯವಾಗಿದೆ. ಇದಲ್ಲದೇ  ಮೇ 11 ರಿಂದ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಲಸಿಕೆಗಳನ್ನು ನೀಡಲು ಸರಕಾರ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದು, ಶೇಕಡಾ 70 ರಷ್ಟು ಲಸಿಕೆಗಳನ್ನು ಮೊದಲ ಡೋಸ್ ಪಡೆದವರಿಗಾಗಿ ಕಾಯ್ದಿರಿಸುವಂತೆ ಮತ್ತು ಉಳಿದ ಶೇ 30೦ ರಷ್ಟನ್ನು ಮೊದಲ ಡೋಸ್ ಬಳಕೆಗೆ ಉಪಯೋಗಿಸಿಕೊಳ್ಳಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ಲಾಕ್ ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪೂರೈಕೆ

LEAVE A REPLY

Please enter your comment!
Please enter your name here