girl-washed-away-in-open-drain

ಬೆಂಗಳೂರು: ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳು ಮಾರುತಹಳ್ಳಿ ಬಳಿಯ ರಾಜಾಕಾಲುವೆಯಲ್ಲಿ ಬಿದ್ದು ಕೊಚ್ಚಿಹೋಗಿರುವ ಘಟನೆ ಇಂದು ನಡೆದಿದೆ.

ಅಸ್ಸಾಂ ಮೂಲದ ನಿತ್ಯಾನಂದ ಅವರ ಪುತ್ರಿ ಮೊನಲಿಕಾ ತನ್ನ ಕುಟುಂಬದೊಂದಿಗೆ ಮಂತ್ರಿ ಅಪಾರ್ಟಮೆಂಟ್ ಸಮೀಪದಲ್ಲಿ ವಾಸವಾಗಿದ್ದಳು. ಇಂದು ಮಧ್ಯಾಹ್ನ ಸುಮಾರಿಗೆ ಆಟವಾಡುತ್ತ ಇದ್ದ ಸಮಯದಲ್ಲಿ ಆಯತಪ್ಪಿ ರಾಜಾಕಾಲುವೆಗೆ ಬಿದ್ದಿದ್ದಾಳೆ. ಪೋಷಕರು ಓಡಿಬಂದು ನೋಡ ನೋಡುತ್ತಿದ್ದಂತೆ ಮಗಳು ಕೊಚ್ಚಿ ಹೋಗಿದ್ದಾಳೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಮಾರುತಹಳ್ಳಿ ಪೊಲೀಸರು ಆಗಮಿಸಿ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದರಿಂದ ಬಹಳ ದೂರ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here