ಭಾರತೀಯ ಮಾಧ್ಯಮಗಳು ತೈವಾನ್ ದೇಶದ ರಾಷ್ಟ್ರೀಯ ದಿನಾಚರಣೆಯ ಶುಭಾಶಯದ ಜಾಹಿರಾತುಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಕಮ್ಯುನಿಷ್ಟ ಚೀನಾ ಆಕ್ಷೇಪವನ್ನು ಎತ್ತಿಟ್ಟು. ಈ ಕುರಿತು ಪ್ರತಿಕ್ರಿಯಿಯೇ ನೀಡಿರುವ ತೈವಾನ್ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೇಲೆ ತನ್ನ ನೀತಿಯನ್ನು ಹೇರಲು ಪ್ರಯತ್ನಿಸುತ್ತಿರುವ ಚೀನಾಗೆ ಗೆಟ್ ಲಾಸ್ಟ್ ಎಂದು ಕಟು ಸಂದೇಶ ರವಾನಿಸಿದೆ.
ತೈವಾನ್ ನ ರಾಷ್ಟೀಯ ದಿನಾಚರಣೆಯ ನಿಮಿತ್ತ ಭಾರತೀಯ ಮಾಧ್ಯಮಗಳಲ್ಲಿ ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್ ಬಾವಚಿತ್ರವಿರುವ ಜಾಹಿರಾತುಗಳನ್ನು ಪ್ರಕಟಿಸಿದ್ದವು. ಇದರಿಂದ ಕೋಪಗೊಂಡ ಚೀನಾ ಭಾರತದ ವಿರುದ್ಧ ಹರಿಹಾಯ್ದಿತ್ತು. ತೈವಾನ್ ಒಂದು ದೇಶವೇ ಅಲ್ಲ, ಅದು ಚೀನಾದ ಒಂದು ಭಾಗ. ಭಾರತ ಜಗತ್ತಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಹೇಳಿಕೆಯನ್ನು ನೀಡಿತ್ತು.
ಇದಕ್ಕೆ ಪ್ರತಿಕ್ರೀಯೆ ನೀಡಿರುವ ತೈವಾನ್ ವಿದೇಶಾಂಗ ಮಂತ್ರಿ ” ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ತನ್ನದೇ ಆದ ಮಾಧ್ಯಮ ಸ್ವಾತಂತ್ರ್ಯ ಮತ್ತು ಸಿದ್ಧಾಂತಗಳು ಅವಕ್ಕಿದೆ. ಚೀನಾ ತನ್ನ ನೀತಿಯನ್ನು ಭಾರತದ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಇದು ಸರಿಯಲ್ಲ. ಇದಕ್ಕೆ ತೈವಾನ್ ನ ಉತ್ತರ ಗೆಟ್ ಲಾಸ್ಟ್ ಒಂದೇ” ಎಂದು ತೀವ್ರ ಖಾರವಾಗಿ ಪ್ರತಿಕ್ರಿಯಿಯೆಯನ್ನು ನೀಡಿದ್ದಾರೆ.