ನವದೆಹಲಿ: ಭಾರತದಲ್ಲಿ ಜನ ಸಾಮಾನ್ಯರು ಹಣ ಸಂಪಾದನೆಗೆ ಹೆಣಗಾಡುತ್ತಿದ್ದರೆ ಇಲ್ಲಿನ ಶ್ರೀಮಂತ ಉದ್ಯಮಿಗಳು ಮಾತ್ರ ದಿನದಿಂದ ದಿನಕ್ಕೆ ತಮ್ಮ ಆಸ್ತಿಯನ್ನು ದ್ವಿಗುಣಗೊಳಿಸುತ್ತಲೇ ಸಾಗಿದ್ದಾರೆ. ಈ ಬಾರಿ ಫೋಬ್ಸ್ ತನ್ನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಅದರಲ್ಲಿ ಗೌತಮ್ ಅದಾನಿ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ದೇಶದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ, ದೇಶದ 100 ಶ್ರೀಮಂತರ ಪಟ್ಟಿಯಲ್ಲಿ 150 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಎರಡನೆಯ ಸ್ಥಾನಕ್ಕೆ ಕುಸಿದಿರುವ ಅಂಬಾನಿ 88 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
ಇದನ್ನು ಓದಿ: ಮಲ್ಲಿಕಾರ್ಜುನ ಖರ್ಗೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಈ ಬಾರಿ ಹಲವು ಹೊಸಮುಖಗಳು ಸೇರಿಕೊಂಡಿವೆ. ಅವುಗಳಲ್ಲಿ ಪ್ರಮುಖವಾಗಿ ನೈಕಾ ಪ್ಯಾಷನ್ ಇಂಡಸ್ಟ್ರಿಯ ಫಲ್ಗುಣಿ ನಾಯರ್, ವೇದಾಂತಾ ಫ್ಯಾಶನ್ಸ್ ನ ರವಿ ಮೋದಿ ಮತ್ತು ಮೆಟ್ರೋ ಬ್ರಾಂಡ್ಸ್ ನ ರಫೀಕ್ ಮಲ್ಲಿಕ್ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ರೂಪಾಯಿ ಮೌಲ್ಯ 10% ಕುಸಿತ ಕಂಡಿದ್ದರೂ ಶ್ರೀಮಂತರಿಗೆ ಯಾವುದೇ ತೊಂದರೆಯಾದಂತೆ ಕಂಡುಬರುತ್ತಿಲ್ಲ. ಭಾರತದ 100 ಶ್ರೀಮಂತರ ಒಟ್ಟು ಆಸ್ತಿಯ ಸಂಪತ್ತು ಕಳೆದಬಾರಿ 25 ಶತಕೋಟಿ ಡಾಲರ್ ಇದ್ದರೆ, ಅದು ಈ ಬಾರಿ 800 ಶತಕೋಟಿ ಡಾಲರ್ ಗೆ ಹೆಚ್ಚಳವಾಗಿದೆ.