g-madhagowda-passes-away

ಮಂಡ್ಯ: ಕಾವೇರಿ ಹೋರಾಟಗಾರ ಮಾಜಿ ಸಂಸದ ಜಿ ಮಾದೇಗೌಡ (92) ಅವರು ಇಂದು ಕೆ ಎಂ ದೊಡ್ಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರು ಹಲವು ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

1980 ರ ಗುಂಡೂರಾವ್ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿ ಸೇವೆಸಲ್ಲಿದ್ದ ಇವರು, ಮಂಡ್ಯ ಲೋಖಸಭೆ ಕ್ಷೇತ್ರದಿಂದ 1989 ಮತ್ತು 1991 ರಲ್ಲಿ ಎರಡು ಬಾರಿ ಆಯ್ಕೆಯಾಗಿದ್ದರು. ಇವರು ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಕೆಲದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ ಎಂ ದೊಡ್ಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿರಿ: ಬಾಪುನಗರ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಎನ್.ಮಹೇಶ್ ಗುದ್ದಲಿ ಪೂಜೆ

LEAVE A REPLY

Please enter your comment!
Please enter your name here