1694-new-covid-19-cases-reported-in-karnataka

ಬೆಂಗಳೂರು (ಜು. 3): ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದೆ. ಇದೆ ರೀತಿಯಾದರೆ ನಾವೆಲ್ಲಾ ಈ ಸೋಂಕಿನಿಂದ ಬಚಾವಾಗುವುದು ಹೇಗೆ ಎಂಬ ಚಿಂತೆ ಸಾಮಾನ್ಯರಲ್ಲಿ ಕಾಡುತ್ತಿದೆ. ಹಾಗಾದರೆ ಇಂದು ಈ ಸೋಂಕಿನ ಸಂಚಾರ ಹೇಗಿದೆ ಎನ್ನುವುದನ್ನು ಸ್ವಲ್ಪ ವಿವರವಾಗಿ ತಿಳಿಯೋಣ ಬನ್ನಿ..

ಜನರ ನಿರ್ಲಕ್ಷವೋ ಅಥವಾ ಸರ್ಕಾರದ ದೊರಣೆಯೊ, ತನ್ನ ಅಟ್ಟಹಾಸವನ್ನು ಜನತೆಯ ಮೇಲೆ ತೋರುತ್ತ ಕೊರೊನಾ ಎಂಬ ಮಹಾ ಮಾರಿ ಮುಂದುವರೆಡಿದೆ. ರಾಜ್ಯದಲ್ಲಿ ಇಂದು 1694 ಮಂದಿಗೆ ಸೋಂಕು ದೃಡವಾಗಿದ್ದು, ಈ ಮೂಲಕ  ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 19710 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ಬರೋಬ್ಬರಿ 21 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜನರಲ್ಲಿ  ಆತಂಕವನ್ನು ಹೆಚ್ಚಿಸಿದೆ.

ಬೆಂಗಳೂರಿನ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಬೆಂಗಳೂರಿನಲ್ಲಿ ಇಂದು 994 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಉಳಿದ ಜಿಲ್ಲೆಗಳತ್ತ ನೋಡಿದರೆ ಅವುಗಳ ಪರಿಸ್ಥಿತಿಯೇನು ಬೇರೆಯಾಗಿಲ್ಲ. ಜನರಿಗೆ ಮನೆಯಲ್ಲಿ ಕೂರಲು ಆರ್ಥಿಕತೆಯ, ಹೊಟ್ಟೆಯ ಚಿಂತೆ, ಆದರೆ ಕೊರೋನಾಗೆ ಒಬ್ಬರಾದ ಮೇಲೆ ಒಬ್ಬರಂತೆ ತನ್ನ ವಶ ಮಾಡಿಕೊಳ್ಳುವ ಆತುರ. ಸಂದಿಗ್ದತೆಗೆ ಜನತೆ ಸಿಲುಕಿದ್ದು, ಯಾವುದೋ ಮಾರಿಗೆ ಹೆದರಿ ಹಸಿವಿನಿಂದ ಸಾಯುವುದು ಬೇಡವೆಂದು ಹೊರಬರುತ್ತಿದ್ದಾರೆ.

ರಾಜ್ಯದಲ್ಲಿನ ಇಂದಿನ ಜಿಲ್ಲಾವಾರು ಸೋಂಕಿತರು

ಇನ್ನು ಈ ಸೋಂಕು ಹರಡುತ್ತಲೇ ಸಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈ ರೀತಿಯಾಗಿ ಕಂಡುಬಂದಿದೆ. ಬೆಂಗಳೂರು ನಗರ 994, ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24, ಶಿವಮೊಗ್ಗ 23, ಗದಗ 19, ಉಡುಪಿ 16, ಕೊಡಗು 16,ಯಾದಗಿರಿ 14, ಹಾಸನ 13, ಬೆಳಗಾವಿ 13, ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ದಾವಣಗೆರೆ 5, ಉತ್ತರ ಕನ್ನಡ 5, ವಿಜಯಪುರ 4, ಕೊಪ್ಪಳ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 3, ಹಾವೇರಿ 1 ಸೋಂಕಿತರು ಕಂಡು ಬಂದಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟವರೆಷ್ಟು ?

ಇಂದು ಒಟ್ಟು 21 ಮಂದಿ ಮೃತಪಟ್ಟಿದ್ದು, ಬೆಂಗಳೂರು ನಗರದಲ್ಲಿ 6, ಕಲಬುರಗಿ 3, ಚಿಕ್ಕಬಳ್ಳಾಪುರ 3, ವಿಜಯಪುರ 2, ಶಿವಮೊಗ್ಗ 2, ಹಾಸನ 1, ದಾವಣಗೆರೆ 1, ಬೀದರ್ 1, ರಾಯಚೂರು 1, ಬಳ್ಳಾರಿ 1 ಸಾವುಗಳು ಸಂಬವಿಸಿವೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 293 ಕ್ಕೆ ಏರಿಕೆಯನ್ನು ಕಂಡಿದೆ.

ಎಷ್ಟು ಮಂದಿ ಆಸ್ಪತ್ರೆಯಿಂದ ಬಿಡುಗಡೆ ?

ಬೆಂಗಳೂರು ನಗರ 197, ದಕ್ಷಿಣ ಕನ್ನಡ 51, ಬಳ್ಳಾರಿ 28, ವಿಜಯಪುರ 28, ಕೊಪ್ಪಳ 26, ಧಾರವಾಡ 20, ಮೈಸೂರು 20, ಯಾದಗಿರಿ 17, ಕಲಬುರಗಿ 17, ಉಡುಪಿ 14, ದಾವಣಗರೆ 13, ಗದಗ 12, ಹಾಸನ 9, ಉತ್ತರ ಕನ್ನಡ 8, ಕೋಲಾರ 5, ಹಾವೇರಿ, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ತಲಾ ಇಬ್ಬರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಐಸಿಯುನಲ್ಲಿ ಎಷ್ಟು ಮಂದಿ ?

ಒಟ್ಟು 201 ಮಂದಿ ಐಸಿಯುನಲ್ಲಿದ್ದಾರೆ. ಬೆಂಗಳೂರು 121, ಧಾರವಾಡ19, ಹಾಸನ 9, ಬೀದರ್‌ 6, ರಾಯಚೂರು 5, ಬಳ್ಳಾರಿ 5, ಉಡುಪಿ 4, ಕಲಬುರಗಿ, ಮೈಸೂರು, ಗದಗ, ಕೋಲಾರ, ಬಾಗಲಕೋಟೆ , ತುಮಕೂರಿನಲ್ಲಿ ತಲಾ ಮೂವರು, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ, ದಕ್ಷಿಣ ಕನ್ನಡ, ಕೊಪ್ಪಳದಲ್ಲಿ ತಲಾ ಇಬ್ಬರು, ಕೊಡಗು, ದಾವಣಗೆರೆ, ಮಂಡ್ಯದಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here