ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್: ಸರ್ಕಾರದ ಚಿಂತನೆ

pu-exam-results-by-july-end-sslc-exam-results-by-august-says-suresh-kumar

ಮೈಸೂರು: ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ತಾಂಡವವಾಡಲು ಆರಂಭಿಸಿದಂದಿನಿಂದ ಮಕ್ಕಳ ಕಲಿಕೆಯು ನಿಧಾನವಾಗಿದೆ. ಈ ಪರಿಸ್ಥಿತಿಯಲ್ಲಿ ಅವರ ಕಲಿಕೆಯನ್ನು ಮುನ್ನಡೆಸಲು ಆನ್ ಲೈನ್ ಶಿಕ್ಷಣ ಪದ್ದತಿಯನ್ನು ಬಳಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ಬಡ ಮಕ್ಕಳ ಶಿಕ್ಷಣದ ಹಿನ್ನಡೆಗೆ ಕಾರಣವಾಗಿರುವುದಂತೂ ಸುಳ್ಳಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್‌ಫೋನ್‌ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿರಿ: ಮೇ 2021 ರ ವಿವಿಧ ಉದ್ಯೋಗ ಮಾಹಿತಿಗಳು

ಹಳ್ಳಿಗಳಲ್ಲಿರುವ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರಸ್ತುತ ಆನ್ ಲೈನ್ ಕಲಿಕೆಗೆ ಕಡ್ಡಾಯವಾಗಿ ಸ್ಮಾರ್ಟ್ ಫೋನ್ ಇರುವುದು ಅಗತ್ಯವಾಗಿದೆ. ಈ ಸಂಬಂಧ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ಮಾಡಲಾಗಿದೆ ಎಂದು ಮೈಸೂರಿನ ಡಿಡಿಪಿಐ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಹೇಳಿದರು.

ಆನ್ ಲೈನ್ ಶಿಕ್ಷಣದಿಂದ ಯಾವುದೇ ಬಡ ಮಕ್ಕಳು ವಂಚಿತರಾಗುವುದು ಸರಿಯಲ್ಲ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ, ಬಡ ಮಕ್ಕಳ ಸಹಾಯಕ್ಕೆ ಬರಲಿದೆ ಎಂದು ಇದೆ ಸಮಯದಲ್ಲಿ ಹೇಳಿದ್ದಾರೆ.

ಇದನ್ನೂ ಓದಿರಿ: ಸೈಕ್ಲೋನ್ ಪ್ರಭಾವದಿಂದಾಗಿ 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ: ಯಾವಾಗ ಬರಲಿದೆ ಫುಲ್ ಡಿಟೈಲ್ಸ್ ಇಲ್ಲಿದೆ

LEAVE A REPLY

Please enter your comment!
Please enter your name here