ನವದೆಹಲಿ: ಕರೋನಾ ಎರಡನೆಯ ಅಲೆಯು ದೇಶವನ್ನು ಬಾದಿಸುತ್ತಿದ್ದು, ಕೆಲವು ರಾಜ್ಯಸರ್ಕಾರಗಳು ಲಾಕ್ ಡೌನ್ ನನ್ನ ಘೋಷಿಸಿಕೊಂಡಿವೆ. ಅಲ್ಲದೇ ರೋಗದ ತೀವ್ರತೆಯನ್ನು ಮನಗಂಡು ಕೇಂದ್ರ ಸರಕಾರ ಬಡವರಿಗೆ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಎರಡು ತಿಂಗಳ ಉಚಿತ ಪಡಿತರ ನೀಡಲು ನಿರ್ಧರಿಸಿದೆ.
ಕಳೆದ ಬಾರಿ ದೇಶದಲ್ಲಿ ಕೊರೋನಾ ಸಮಸ್ಯೆ ಉಂಟಾದಾಗಲೂ ಕೇಂದ್ರ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಬಡವರಿಗೆ ಪಡಿತರವನ್ನು ಉಚಿತವಾಗಿ ಪೂರೈಸಿತ್ತು. ಅದೇ ರೀತಿ ಈ ಬಾರಿಯು ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ಯೋಜನೆಗೆ 26000 ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು, 80 ಕೋಟಿ ಜನರು ಇದರ ಲಾಭವನ್ನು ಪಡೆಯಲಿದ್ದಾರೆ.