ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅನುಮತಿ ಬೇಕೆ ? 

former-pm-hd-devegowda-reactions-to-congress-leader-siddaramaiah-statement-on-modi-meeting

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅನುಮತಿ ಬೇಕೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಪ್ರಧಾನಿಗಳನ್ನು ಭೇಟಿ ಮಾಡುವುದು ನನಗೆ ಹೊಸದೇನಲ್ಲ, ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ಬಾರಿ ಭೇಟಿಯಾಗಿದ್ದೆ. ಇನ್ನು ನರೇಂದ್ರ ಮೋದಿ ಪ್ರಧಾನಿಯಾದಮೇಲೆ ಇದೇ ಮೊದಲೇನಲ್ಲ. ಏಲೆಂಟು ಬಾರಿ ಭೇಟಿಯಾಗಿದ್ದೇನೆ. ಮೋದಿ ಅವರನ್ನು ಭೇಟಿಯಾದ ತಕ್ಷಣ ಜೆಡಿಎಸ್​​ ಅವರಿಗೆ ಒಪ್ಪಿಸಿದಂತೆ ಆಗುತ್ತದೆಯೇ? ಎಂಥ ಮೂರ್ಖತನದ ಮಾತು ಎಂದು ಸಿದ್ದರಾಮಯ್ಯ ಮಾತಿಗೆ ಆಕ್ಷೇಪಿಸಿದರು.

ಇದನ್ನೂ ಓದಿರಿ: ಚಂದನವನದ ಹಿರಿಯ ನಟ ಶಿವರಾಮ್ ತಲೆಗೆ ಬಲವಾದ ಪೆಟ್ಟು, ಐಸಿಯುನಲ್ಲಿ ಚಿಕಿತ್ಸೆ !

ನಾನು ವಾಜಪೇಯಿ ಅವರನ್ನೂ ಭೇಟಿಯಾಗಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರೆಂಡರ್ ಮಾಡ್ತೇವೆ ಅಂತ ಹೇಳಿದ್ದೇವೆಯೇ ನಾನ್ ಸೆನ್ಸ್ ಎಂದು ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆ ಮಾತನಾಡುತ್ತ ಶಿಡ್ಲಘಟ್ಟದಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

LEAVE A REPLY

Please enter your comment!
Please enter your name here