ಗುಜರಾತಿನ ಕೆವಡಿಯಾದಲ್ಲಿ ನರ್ಮದಾ ನದಿಯ ದಡದಲ್ಲಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಹೆಚ್ ಡಿ ದೇವೇಗೌಡ ಅವರು ಬೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂಬಂಧ ದೇವೇಗೌಡ ಅವರು ಟ್ವಿಟರ್ ನಲ್ಲಿ ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಬೇಟಿ ನೀಡಿದ್ದೆ ಎಂದು ಚಿತ್ರಗಳನ್ನು ಹಂಚಿಕೊಂಡಿದ್ದರು.
ನಮ್ಮ ಮಾಜಿ ಪ್ರಧಾನಿ ದೇವೇಗೌಡ ಅವರು ಸರ್ದಾರ್ ಪ್ರತಿಮೆಗೆ ಬೇಟಿ ನೀಡಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿಯವರು ದೇವೇಗೌಡ ಅವರನ್ನು ಪ್ರಶಂಸಿಸಿದ್ದಾರೆ. ಕಳೆದವರ್ಷ ನರ್ಮದಾ ನದಿ ತೀರದಲ್ಲಿ ಸುಮಾರು 597 ಅಡಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಯನ್ನು ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದರು.
ಇದನ್ನೂ ಓದಿರಿ: ಬಾಲಾಕೋಟ್ ಮೇಲೆ ನಡೆಸಿದ ಏರ್ ಸ್ಟ್ರೈಕ್ ನ ರೋಮಾಂಚನಕಾರಿ ವಿಡಿಯೋ ಬಿಡುಗಡೆ
ನರ್ಮದಾ ತೀರದಲ್ಲಿ ನಿರ್ಮಾಣವಾಗಿರುವ ಏಕತಾ ಪ್ರತಿಮೆ ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಈ ಪ್ರತಿಮೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಂಡು ಪ್ರಖ್ಯಾತಿಯನ್ನು ಗಳಿಸಿದೆ. ಸದ್ಯ ದೇವೇಗೌಡರು ಬೇಟಿ ನೀಡಿರುವ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ.
Happy to see our former PM Shri @H_D_Devegowda Ji visit the ‘Statue of Unity.’ https://t.co/GVWMo7UIow
— Narendra Modi (@narendramodi) October 6, 2019
ಇದನ್ನೂ ಓದಿರಿ: ಅಂತೂ ಕೇಂದ್ರದಿಂದ ಬಂತು ಮಧ್ಯಂತರ ನೆರೆ ಪರಿಹಾರ ನಿಧಿ