milkha-singh-battles-rough-day-oxygen-saturation-level-dips

ಚಂಡೀಗಢ: ಕೊರೋನಾ ಸೋಂಕಿಗೆ ತುತ್ತಾಗಿದ್ದ ಅಥ್ಲೀಟ್ ಮಿಲ್ಕಾಸಿಂಗ್ (91) ಅವರನ್ನು ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕೊರೋನಾ ವಿಭಾಗದಲ್ಲಿ ಹಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಮಿಲ್ಕಾ ಸಿಂಗ್ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.

ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಮಿಲ್ಕಾ ಸಿಂಗ್ ಅವರನ್ನು ಪಿಜಿಐಎಂಇಆರ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೋವಿಡ್ ನೆಗಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಕೋವಿಡ್ ಅಲ್ಲದ ವೈದ್ಯಕೀಯ ತೀವ್ರ ನಿಗಾ ಘಟಕದಲ್ಲಿ ಸ್ಥಳಾಂತರಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸುಮಾರು 11.30ಕ್ಕೆ ಕೊನೆಯುಸಿರೆಳದಿದ್ದಾರೆ.

ಕಳೆದ ಭಾನುವಾರ ಮಿಲ್ಕಾ ಸಿಂಗ್ ಅವರ ಪತ್ನಿ ನಿರ್ಮಲ್ (85) ಅವರು ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ. ಅವರು ಹಿಂದೆ ಪಂಜಾಬ್ ಸರ್ಕಾರದ ಮಹಿಳಾ ಕ್ರೀಡಾ ನಿರ್ದೇಶಕ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕ್ಯಾಪ್ಟನ್ ಸಹ ಆಗಿದ್ದರು. ಮಿಲ್ಕಾ ಅವರಿಗೆ ಓರ್ವ ಮಗ ಮತ್ತು ಮಗಳು ಇದ್ದಾರೆ. ಮಗ ಜೀವಾ ಮಿಲ್ಕಾ ಸಿಂಗ್ ಗಾಲ್ಫ್ ಆಟಗಾರರಾಗಿದ್ದಾರೆ.

LEAVE A REPLY

Please enter your comment!
Please enter your name here