ಬೆಂಗಳೂರು: ರಾಜ್ಯದಲ್ಲಿ ಕೆಲದಿನಗಳಿಂದ ಚಳಿಯು ಹೆಚ್ಚಾಗುತ್ತಿದೆ. ಈ ಚಳಿಗೆ ಕಂಗಾಲಾಗಿರುವ ಜನತೆಗೆ ಹವಾಮಾನ ಇಲಾಖೆಯು ಮತ್ತೊಂದು ಶಾಕ್ ನೀಡಿದ್ದು, ಉತ್ತರ ಒಳನಾಡಿನ ಈ ಎಲ್ಲಾ ಜಿಲ್ಲೆಗಳಲ್ಲಿ ಶೀತಮಾರುತ ಬೀಸುವ ಸಾಧ್ಯತೆ ಇದೆ ಎಂದು ಹೇಳಿದೆ.
ರಾಜ್ಯದಲ್ಲಿ ಕೆಲದಿನಗಳಿಂದ ತಾಪಮಾನ ಕುಸಿಯುತ್ತಿದ್ದು, ಜನತೆ ಚಳಿಗೆ ಕಂಗಾಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ತೀವ್ರ ಶೀತಮಾರುತದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಶೀತ ಮಾರುತ ಬೀಸುವ ಸಾಧ್ಯತೆಯಿದ್ದು, ಕಡಿಮೆ ಉಷ್ಣಾಂಶ ದಾಖಲಾಗಬಹುದು ಎಂದು ಹೇಳಿದೆ.
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಶೇಖರಣೆಯಾಗಿದೆ. ಇದರಿಂದಾಗಿ ವಾಡಿಕೆಗಿಂತಲೂ ಮುಂಚೆಯೇ ಈ ಬಾರಿ ಚಳಿ ಆರಂಭವಾಗಿದ್ದು, ಈ ಚಳಿ ಇನ್ನೂ ಕೆಲದಿನ ಹೀಗೆಯೆ ಮುಂದುವರೆಯಲಿದೆ.
ಇದನ್ನೂ ಓದಿರಿ: ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ: ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ
ಸೋಮವಾರ ಬೀದರ್ ನಲ್ಲಿ ತಾಪಮಾನ ರಾಜ್ಯದಲ್ಲಿಯೇ ಅತಿ ಕನಿಷ್ಠ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ 6.5, ಬಳ್ಳಾರಿಯಲ್ಲಿ 7.2, ಧಾರವಾಡದಲ್ಲಿ 9.8, ಬೆಳಗಾವಿಯಲ್ಲಿ 10, ಕಲಬುರಗಿಯಲ್ಲಿ 11.4 ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಠ ತಾಪಾಮನ ದಾಖಲಾಗಿದೆ.
ಇದನ್ನೂ ಓದಿರಿ: ಪ್ರಧಾನಿಗೆ ಉಡುಗೊರೆ ನೀಡಲು ಬೇಲೂರು ಶಿಲಾಬಾಲಿಕೆ ವಿಗ್ರಹ ತಯಾರಿಸಿದ ಯುವ ಕಲಾವಿದ