fodder-scam-jharkhand-hc-grants-bail-to-lalu-prasad-yadav-in-chaibasa-treasury-case

ಆರ್ ಜೆಡಿ ನಾಯಕ ಲಾಲೂ ಪ್ರಸಾದ ಯಾದವ್ ಅವರಿಗೆ ಬಹುಕೋಟಿ ಮೇವು ಹಗರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೂ ಇನ್ನೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅವರು ಸೆರೆವಾಸವನ್ನು ಅನುಭವಿಸುವುದು ಅನಿವಾರ್ಯವಾಗಿದೆ.

1992-93 ರಲ್ಲಿ ಚಾಯಿಬಾಸ ಖಜಾನೆಯಿಂದ 33.67 ಕೋಟಿ ರೂಪಾಯಿಯ ಹಣವನ್ನು ಅಕ್ರಮವಾಗಿ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈಗ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮೇವು ಹಗರಣಕ್ಕೆ ಸೇರಿದ ಹಲವು ಪ್ರಕರಣಗಳಲ್ಲಿ ದೋಷಿಯಾಗಿರುವ ಇವರು ಸದ್ಯ ಚಾಯಿಬಾಸಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತಿದ್ದರೂ ದುಮ್ಕಾ ಖಜಾನೆ ಪ್ರಕರಣ ಇನ್ನೂ ಬಾಕಿಯಿದೆ. ಹಾಗಾಗಿ ಸದ್ಯ ಜೈಲಿನಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಇದನ್ನೂ ಓದಿರಿ: ಕೇಂದ್ರ ಸಚಿವ ಪಾಸ್ವಾನ್ ಅಂತಿಮ ದರ್ಶನ ಪಡೆದ ರಾಷ್ಟ್ರಪತಿ, ಪ್ರಧಾನಿ: ನಾಳೆ ಪಾಟ್ನಾದಲ್ಲಿ ಅಂತ್ಯಕ್ರಿಯೆ

LEAVE A REPLY

Please enter your comment!
Please enter your name here