ಧಾರವಾಡದಲ್ಲಿ ಜರುಗಿದ 84 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಇಂದು ತೆರೆ ಕಂಡಿತು. ಈ ಬಾರಿಯ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಸಮ್ಮೇಳನಾ ಅಧ್ಯಕ್ಷ ಡಾ. ಚಂದ್ರಶೇಕರ್ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರ ಸಾರತ್ಯದಲ್ಲಿ ನಡೆಯಿತು.

ಈ ಬಾರಿಯ ಸಮ್ಮೇಳನದಲ್ಲಿ ಕೆಲವು ಮಹತ್ವದ ವಿಷಯಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಇವುಗಳಲ್ಲಿ ರಾಜ್ಯ ಸರಕಾರ ಪ್ರಾರಂಭಿಸಲು ಹೊರಟಿರುವ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಅಲ್ಲದೇ ಕೇಂದ್ರ ಸರಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಕೇಳಿಕೊಳ್ಳಲಾಯಿತು.

ಈ ಬಾರಿಯ ಸಮ್ಮೇಳನದಲ್ಲಿ ನಾಡಗೀತೆ ಹಾಡುವ ಅವಧಿಯನ್ನು 2.30 ನಿಮಿಷಗಳಿಗೆ ನಿಗದಿಗೊಳಿಸಬೇಕೆಂದು ಒಮ್ಮತದಿಂದ ನಿರ್ಣಯಿಸಲಾಯಿತು. ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಸೇರಿದಂತೆ 1 ರಿಂದ 7 ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಗೊಳಿಸಬೇಕೆಂದು ಹಾಗೂ ಈ ಸಮ್ಮೇಳನ ಯಶಸ್ವಿಗೊಳ್ಳಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲಾಯಿತು.

Image Copyright : google.com

LEAVE A REPLY

Please enter your comment!
Please enter your name here