ಜಮ್ಮು ಕಾಶ್ಮೀರ: ಫಾರೂಕ್ ಅಬ್ದುಲ್ಲಾ ಅವರು ಸೋಮವಾರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಇದೇ ವೇಳೆ ಭಾರತೀಯ ಸೇನೆಯ ಕುರಿತು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರು ಮಾತನಾಡುತ್ತಾ, ಸೇನೆ ಮತಗಟ್ಟೆಯನ್ನು ವಶಕ್ಕೆ ಪಡೆದು ಮತದಾನವಾಗದಂತೆ ತಡೆದಿದ್ದಾರೆ ಎಂದು ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ ಸದಾ ದೇಶದ ಸೇನೆಯ ಕುರಿತು ನಾಲಿಗೆ ಹರಿಬಿಡುವ ವಿಚಾರ ನಿಮಗೆಲ್ಲ ತಿಳಿದೇ ಇದೆ. ಇತ್ತೀಚಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಚುನಾವಣೆ ನಡೆಯುತ್ತಿದ್ದ ಮತಗಟ್ಟೆಯನ್ನು ವಶಕ್ಕೆ ಪಡೆದುಕೊಂಡು ಮತದಾನವಾಗದಂತೆ ಸೇನೆ ತಡೆಹಿಡಿದಿತ್ತು ಎಂದು ಹೇಳಿದ್ದಾರೆ.
ಅವರು ಮಾತನಾಡುತ್ತ,ನಾನು ಮುಖ್ಯಮಂತ್ರಿಯಾಗಿದ್ದಾಗ ದೋಡಾದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಸೇನೆ ಅವಕಾಶ ನೀಡಲಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂದರು. ‘ಇನ್ನು ಮುಂದೆ ಈ ರೀತಿ ಮಾಡದಂತೆ ಸೇನೆಗೆ ಎಚ್ಚರಿಕೆ ನೀಡಲು ನಾನು ಬಯಸುತ್ತೇನೆ. ಈ ರೀತಿಯಲ್ಲಿ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನಾನು ಸರ್ಕಾರಕ್ಕೆ ಹಾಗೂ ಸೇನೆಗೆ ಹೇಳಲು ಬಯಸುತ್ತೇನೆ, ಇದೇ ರೀತಿ ಮುಂದುವರೆದರೆ ಫಲಿತಾಂಶವು ಕೆಟ್ಟದಾಗಿರುತ್ತದೆ. ನಾವು ಪ್ರಾಣ ಕೊಡಲೂ ಸಿದ್ಧರಿದ್ದೇವೆ’ ಎಂದು ಅಬ್ದುಲ್ಲಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ 370 ವಿಧಿಯನ್ನು ತೆಗೆದ ನಂತರ ಅತಂತ್ರವಾಗಿರುವ ಅಲ್ಲಿನ ರಾಜಕಾರಣಿಗಳು ಜನರನ್ನು ಒಲಿಸಿಕೊಳ್ಳಲು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಅಂತೆಯೇ ಇದೀಗ ಫಾರೂಕ್ ಅಬ್ದುಲ್ಲಾ ಸೇನೆಯ ಕುರಿತು ನಾಲಿಗೆ ಹರಿಬಿಟ್ಟು ವ್ಯಾಪಕ ತಿಲಿಕೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿರಿ: ಲಾಲು ಪ್ರಸಾದ್ ಯಾದವ್‌ಗೆ ಮಗಳ ಕಿಡ್ನಿ ಕಸಿ – ಶಸ್ತ್ರಚಿಕಿತ್ಸೆ ಯಶಸ್ವಿ