ಬೆನ್ನಿಗೆ ನಿಂತ ಕಿಚ್ಚನಿಗೆ ಧನ್ಯವಾದ ಹೇಳಿದ ದಚ್ಚು, ಫ್ಯಾನ್ಸ್ ಫುಲ್ ಖುಷ್

fans-are-very-happy-about-darshan-said-thanks-to-kichcha-sudeep

ಬೆಂಗಳೂರು: ಕಳೆದ ಮೂರು ದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ತಮ್ಮ ಕ್ರಾಂತಿ ಚಿತ್ರದ ಹಾಡಿನ ಪ್ರೊಮೋಷನ್ ಗೆ ಹೊಸಪೇಟೆಗೆ ಹೋಗಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಘಟನೆಯನ್ನು ಖಂಡಿಸಿ ಈಗಾಗಲೇ ಕನ್ನಡ ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ.

ಹಿಂದೆ ಕುಚ್ಚಿಕು ಗೆಳೆಯರಂತಿದ್ದು ಬಳಿಕ ಹಲವು ವೈಯಕ್ತಿಕ ಕಾರಣಗಳಿಗೆ ದೂರಾದ ಕಿಚ್ಚ ಸುದೀಪ್ ಹೊಸಪೇಟೆ ಘಟನೆಯನ್ನು ಬಲವಾಗಿ ಖಂಡಿಸಿ ಸುದೀರ್ಘ ಪತ್ರ ಬರೆದಿದ್ದರು. ವೈಷಮ್ಯವನ್ನು ಮರೆತು ಈ ಸಂದರ್ಭದಲ್ಲಿ ಕಿಚ್ಚ ಒಳ್ಳೆಯ ಮಾತುಗಳನ್ನಾಡಿದ್ದು ಹಲವರಿಗೆ ಖುಷಿ ಕೊಟ್ಟಿತ್ತು.

ಇದನ್ನೂ ಓದಿರಿ: ಚೀನಾ, ಅಮೆರಿಕಾದಲ್ಲಿ ಮಹಾಮಾರಿ ಕೊರೋನಾ ಆರ್ಭಟ: ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಖಡಕ್ ಎಚ್ಚರಿಕೆ

ಒಂದು ಕಾಲದ ಗೆಳೆಯ ಈ ಕಷ್ಟದ ಸಂದರ್ಭದಲ್ಲಿ ತನ್ನ ಪರವಾಗಿ ನಿಂತಿದ್ದಕ್ಕೆ, ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ದರ್ಶನ್ ಧನ್ಯವಾದಗಳನ್ನು ಹೇಳಿದ್ದಾರೆ. ಇದು ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಗಳಿಗೆ ಬಹಳ ಖುಷಿ ಕೊಟ್ಟಿದೆ.

ಇದನ್ನೂ ಓದಿರಿ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಹುಟ್ಟುಹಬ್ಬದ ಸಂಭ್ರಮ !

LEAVE A REPLY

Please enter your comment!
Please enter your name here