ಬೆಂಗಳೂರು: ದೇಶದ ಹೆಸರಾಂತ ಸಾಂಪ್ರದಾಯಿಕ ವಸ್ತ್ರದ ಬ್ರ್ಯಾಂಡ್ ಫ್ಯಾಬ್ ಇಂಡಿಯಾ, ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ತನ್ನ ವಿವಾದಾತ್ಮಕ ‘ಜಶ್ನ್ ಇ ರಿವಾಜ್’ ಜಾಹಿರಾತನ್ನು ಹಿಂತೆಗೆದುಕೊಂಡಿದೆ.
ಫ್ಯಾಬ್ ಇಂಡಿಯಾ ಸಂಸ್ಥೆ ದೀಪಾವಳಿ ಹಬ್ಬವನ್ನು ‘ಜಶ್ನ್ ಇ ರಿವಾಜ್’ ಎಂದು ತನ್ನ ಜಾಹಿರಾತಿನಲ್ಲಿ ಕರೆಯುವ ಮೂಲಕ ಹಿಂದೂಯೇತರ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿರಿ: ಅ.25ರಿಂದ 1ರಿಂದ 5ನೇ ತರಗತಿ ಶಾಲೆಗಳ ಆರಂಭ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಜಶ್ನ್ ಇ ರಿವಾಜ್ ಜಾಹಿರಾತಿನಲ್ಲಿ ಮಾಡೆಲ್ ಗಳು ದೀಪಾವಳಿಯ ಆಚರಣೆಯನ್ನು ಅನುಕರಿಸದೆ ಇರುವುದನ್ನು ತೇಜಸ್ವಿ ಸೂರ್ಯ ಅವರು ಖಂಡಿಸಿದ್ದರು. ಧಾರ್ಮಿಕ ಹಬ್ಬಗಳನ್ನು ಯಾವುದೇ ಸಂಸ್ಥೆಗಳಾದರೂ ಗೌರವಿಸಲೇ ಬೇಕು. ಅಲ್ಲದೇ ಒಂದು ಸಂಸ್ಥೆ ತನ್ನ ವ್ಯಾಪಾರದ ಹೆಸರಿನಲ್ಲಿ ಧಾರ್ಮಿಕ ಹಬ್ಬಗಳನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
Deepavali is not Jash-e-Riwaaz.
This deliberate attempt of abrahamisation of Hindu festivals, depicting models without traditional Hindu attires, must be called out.
And brands like @FabindiaNews must face economic costs for such deliberate misadventures. https://t.co/uCmEBpGqsc
— Tejasvi Surya (@Tejasvi_Surya) October 18, 2021
ಫ್ಯಾಬ್ ಇಂಡಿಯಾ ಸಂಸ್ಥೆಯ ದೀಪಾವಳಿಯ ಹಬ್ಬದ ಉಡುಗೊರೆಯ ಕುರಿತಾದ ವಿಡಿಯೋದಲ್ಲಿನ ಕೃತ್ಯಕ್ಕೆ ತೇಜಸ್ವಿ ಸೂರ್ಯ ಅವರು ಟ್ವಿಟರಿನಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಮುಜುಗರಕ್ಕೆ ಒಳಗಾದ ಸಂಸ್ಥೆ ತನ್ನ ಜಾಹಿರಾತನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ: BEL Recruitment 2021: 88 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ