ex-union-minister-ram-jethmalani-passes-away
Image Credit: google.com

ದೆಹಲಿ: ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ದೆಹಲಿಯ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರು ಆರು ಬಾರಿ ರಾಜ್ಯಸಭಾ ಸದಸ್ಯರಾಗಿ, ಏನ್ ಡಿ ಎ ಸರಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಿಂಧ್ ಪ್ರಾಂತ್ಯದ ಸಿಖಾರ್ ನಲ್ಲಿ 1923 ರ ಸೆಪ್ಟೆಂಬರ್ 14ರಂದು ಜನಿಸಿದ್ದ ಇವರು 17 ನೇಳನೇ ವಯಸ್ಸಿನಲ್ಲಿ ಯೇ ಕಾನೂನು ಪದವಿಯನ್ನು ಪಡೆದರು. ಇವರು ವಕೀಲರಾಗಿ ಅನೇಕ ಹಗರಣ, ಬೃಷ್ಟಾಚಾರ ಮತ್ತು ಹವಾಲಾ ಸೇರಿದಂತೆ ಅನೇಕ ವಿವಾದಾತ್ಮಕ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.

ಇವರು ಕೇವಲ ವಕೀಲಿ ವೃತ್ತಿ ಅಲ್ದೇ ಮುಂಬೈನಿಂದ ಬಿಜೆಪಿ ಅಬ್ಯರ್ಥಿಯಾಗಿ ಆರು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಒಂದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲದೇ ಎನ್ ಡಿ ಎ ಸರಕಾರದ ಅವದಿಯಲ್ಲಿ ಕೇಂದ್ರ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವರಾಗಿ ಸಹ ಕೆಲಸ ಮಾಡಿದ್ದರು.

ಇದನ್ನೂ ಓದಿರಿ: ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತ, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಹೇಳಿದ್ದೇನು?

SPONSORED CONTENT

LEAVE A REPLY

Please enter your comment!
Please enter your name here