even-pak-handled-covid-better-than-india-rahul-gandhi

ನವದೆಹಲಿ: ಪಾಕಿಸ್ತಾನ ಮತ್ತು ಅಪಘಾನಿಸ್ಥಾನಗಳು ಭಾರತಕ್ಕಿಂತ ಉತ್ತಮವಾಗಿ ಕೋವಿಡ್ ಸೋಂಕನ್ನು ನಿಯಂತ್ರಿಸಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್ ನಿರ್ವಹಣೆ ಮತ್ತು ಆರ್ಥಿಕ ಪುನಃಶ್ಚೇತನ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಭಾರತದ ಆರ್ಥಿಕ ವೃದ್ಧಿಯು 2020-21ರಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನಕ್ಕಿಂತಲೂ ಕಡಿಮೆಯಿರಲಿದೆ ಎಂದು ಐಎಂಎಫ್ ನೀಡಿರುವ ಚಾರ್ಟನ್ನು ಹಾಕಿ ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿಯು ಶೇ. 10.3 ರಷ್ಟು ಕುಸಿಯಲಿದೆ ಎಂದು ಈ ಚಾರ್ಟ್ನಲ್ಲಿ ಹೇಳಲಾಗಿದೆ. ಇದು ಉಳಿದ ದೇಶಗಳಿಗಿಂತಲೂ ಅತೀ ಹೆಚ್ಚಿನ ಕುಸಿತವಾಗಿದೆ. ಇದಲ್ಲದೆ ಬಾಂಗ್ಲಾದೇಶದ ತಲಾವಾರು ಜಿಡಿಪಿ ಬೆಳವಣಿಗೆಯು ಭಾರತಕ್ಕಿಂತಲೂ ಹೆಚ್ಚಾಗಲಿದೆ ಎಂಬ ಅಂಶವನ್ನು ಐಎಂಎಫ್ ಹೇಳಿರುವುದನ್ನು ಪ್ರಸ್ತಾಪಿಸಿ ರಾಹುಲ್ ಕೇಂದ್ರಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ಮತ್ತು ಕುಸಿಯುತ್ತಿರುವ ಆರ್ಥಿಕ ಸ್ಥಿತಿಯನ್ನು ಪುನಃಶ್ಚೇತನಗೊಳಿಸಲು ಸಾಧ್ಯವಾಗದ ಸ್ಥಿತಿಗೆ ತಂದಿರುವುದೇ ಕೇಂದ್ರ ಸರಕಾರದ ಸಾಧನೆ ಎಂದು ರಾಹುಲ್ ಗಾಂಧಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here