ಮೆಲ್ಬೋರ್ನ್: ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಟಿ-20 ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ ನೀಡಿದ 137 ರನ್ನುಗಳ ಸುಲಭ ಗುರಿಯನ್ನು ಇಂಗ್ಲೆಂಡ್ ಒಂದು ಓವರ್ ಬಾಕಿಯಿರುವಂತೆಯೇ ಪೂರೈಸಿ ಗೆಲುವನ್ನು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ಆರಂಭಿಕ ಆಘಾತವನ್ನೇ ಅನುಭವಿಸಿತು. ಮೊಹಮ್ಮದ್ ರಿಜ್ವಾನ್ ಈ ಪಂದ್ಯದಲ್ಲಿ ಅಬ್ಬರಿಸಲೇ ಇಲ್ಲ. ಕೇವಲ 15 ರನ್ನುಗಳನ್ನು ಗಳಿಸಿ ಫೆವಿಲಿಯನ್ ಸೇರಿಕೊಂಡ. ಇನ್ನು ಪಾಕ್ ಪರವಾಗಿ ಯಾರೂ ಹೇಳಿಕೊಳ್ಳುವಂತಹ ಆಟವನ್ನು ಆಡಲಿಲ್ಲ. ಇನ್ನುಳಿದ ಆಟಗಾರರಾದ ಮೊಹಮ್ಮದ್ ಹ್ಯಾರಿಸ್(8), ಬಾಬರ್ ಅಜಂ (32), ಶಾನ್ ಮಸೂದ್(38) ಮತ್ತು ಶಾದಾಬ್ ಖಾನ್(20) ರನ್ನು ಕಲೆಹಾಕಿದರು.
ಪಾಕಿಸ್ತಾನ ನೀಡಿದ 137 ರನ್ನುಗಳ ಸಣ್ಣ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್, ಆರಂಭಿಕರಾದ ಅಲೆಕ್ಸ್ ಹೇಲ್ಸ್ (1)ಅವರ ವಿಕೆಟನ್ನು ಕಳೆದುಕೊಂಡು ಆಘಾತಕ್ಕೊಳಗಾಯಿತು. ನಂತರ ಬಂದ ಬಟ್ಲರ್ (26), ಫಿಲ್ ಸಾಲ್ಟ್(10), ಹ್ಯಾರಿ ಬ್ರೂಕ್ (20) ಸಣ್ಣ ಮೊತ್ತಕ್ಕೆ ತೆರಳಿದರು. ನಂತರ ಆಲ್ ರೌಂಡರ್ ಬೆನ್ ಸ್ಟೋಕ್ಸ್ (52) ನೆರವಿನಿಂದ ತಂಡ ಗುರಿಯನ್ನು ಸಾಧಿಸಿತು.
ಇದನ್ನೂ ಓದಿರಿ: PM Svanidhi Scheme: ‘ಬೀದಿ ಬದಿ ವ್ಯಾಪಾರಿ’ಗಳಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ !